ಕಾರ್ಕಳದಲ್ಲಿ ಯೋಗಿ ಬೃಹತ್‌ ರೋಡ್‌ ಶೋ

ಕಾರ್ಕಳ : ಪ್ರಭು ಶ್ರೀರಾಮನ ಭಕ್ತನಾಗಿರುವ ನಾನು ಭಜರಂಗಿಯ ಜನ್ಮಸ್ಥಳಕ್ಕೆ ಬಂದಿದ್ದೇನೆ. ಹನುಮಂತನು ಶ್ರೀಲಂಕಾಕ್ಕೆ ಹೋಗಿ ಅಧರ್ಮದ ಕಾರ್ಯವನ್ನು ಸಮಾಪ್ತಿಗೊಳಿದಂತೆ ನೀವು ಕರ್ನಾಟಕದ ಕಾಂಗ್ರೆಸ್, ಜೆಡಿಎಸ್‌ ಪಕ್ಷಗಳ ಅಧರ್ಮಕ್ಕೆ ಪೂರ್ಣವಿರಾಮ ಹಾಕಬೇಕಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಾರ್ಕಳದ ಮಹಾಜನತೆಗೆ ಕರೆ ನೀಡಿದರು.

ಅವರು ಮೇ 6ರಂದು ಕಾರ್ಕಳ ಅನಂತಶಯನದಿಂದ ಶ್ರೀವೆಂಕಟರಮಣ ದೇವಸ್ಥಾನದವರೆಗೆ ನಡೆದ ಮೆಗಾ ರೋಡ್‌ ಶೋದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರಕಾರ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತವು ಎಲ್ಲ ಕ್ಷೇತ್ರದಲ್ಲೂ ಅಭಿವೃದ್ದಿ ಹೊಂದುತ್ತಿದೆ. ಐಟಿ ಹಬ್ ಮೂಲಕ ಕರ್ನಾಟಕವೂ ಭಾರತದ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡಿದೆ. ಕಾರ್ಕಳದ ಜನತೆ ಯಾವಾಗಲೂ ರಾಷ್ಟ್ರೀಯವಾದಕ್ಕೆ ಬೆಂಬಲ ನೀಡಿದ್ದೀರಿ. ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್‌ ಅವರಿಗೆ ಬೆಂಬಲ ನೀಡಿ ಗೆಲ್ಲಿಸಬೇಕೆಂದು ಯೋಗಿ ಮನವಿ ಮಾಡಿಕೊಂಡರು.

2024ರ ಜನವರಿಯಲ್ಲಿ ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣಕ್ಕೆ ಆಹ್ವಾನ
2024ರಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲಿದೆ. ಅದರ ಲೋಕಾರ್ಪಣಾ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನೂ ಆಮಂತ್ರಿಸುತ್ತಿದ್ದೇನೆ. ಈಗಾಗಲೇ ಕರ್ನಾಟಕ ರಾಜ್ಯದ ಭಕ್ತರಿಗೆ ಗೆಸ್ಟ್ ಹೌಸ್ ಸ್ಥಾಪಿಸಲು ಬಿ.ಎಸ್. ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಯೋಧ್ಯೆ ಬಳಿ ಜಾಗ ಕಾಯ್ದಿರಿಸುವ ಕಾರ್ಯವನ್ನು ಮಾಡಿದ್ದಾರೆ. ಅದರ ನಿರ್ಮಾಣ ಕಾರ್ಯವೂ ಆರಂಭವಾಗಿದೆ ಎಂದರು.
ಬಿಜೆಪಿ ರಾಜ್ಯಾ‍ಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಚಿವ ವಿ. ಸುನಿಲ್‌ ಕುಮಾರ್‌, ಬಿಜೆಪಿ ಮುಖಂಡರಾದ ಬೋಳ ಪ್ರಭಾಕರ್‌ ಕಾಮತ್‌, ಎಂ.ಕೆ. ವಿಜಯ ಕುಮಾರ್‌, ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪ್ರಚಾರ ಸಮಿತಿ ಅಧ್ಯಕ್ಷ ಮಹೇಶ್‌ ಶೆಟ್ಟಿ ಕುಡುಪುಲಾಜೆ ಅವರು ಉಪಸ್ಥಿತರಿದ್ದರು.
ಯೋಗಿ ಆದಿತ್ಯನಾಥ್ ಅವರು ಕಾರ್ಕಳಕ್ಕೆ ಇದೇ ಮೊದಲ ಬಾರಿಗೆ ಕಾರ್ಕಳ ಆಗಮಿಸಿದ್ದರು. ಅನಂತಶಯನ ದೇವಾಲಯದಿಂದ ವೆಂಕಟರಮಣ ದೇವಸ್ಥಾನದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರ ಸಂಖ್ಯೆಯಲ್ಲಿ ಜನ ಘೋಷಣೆ ಕೂಗುತ್ತ ಬಿಜೆಪಿ ಬಾವುಟವನ್ನು ಹಾರಿಸುತ್ತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

















































error: Content is protected !!
Scroll to Top