ಅಜೆಕಾರು : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಏ. 26 ರಂದು ಮರ್ಣೆ ಗ್ರಾಮದಲ್ಲಿ ಸಂಭವಿಸಿದೆ. ಸುಧೀಂದ್ರ ನಾಯ್ಕ(42) ಎಂಬುವವರೇ ನೇಣಿಗೆ ಶರಣಾದವರು. ಕಾಡುಹೊಳೆಯಲ್ಲಿರುವ ತಮ್ಮ ಮನೆಯ ಕೋಣೆಯೊಳಗೆ ಫ್ಯಾನ್‌ಗೆ ಬಟ್ಟೆ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ತಂದೆ ರವೀಂದ್ರ ನಾಯ್ಕ ನೀಡಿರುವ ಮಾಹಿತಿಯಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
























