ಗಡ್ಕರಿಗೆ ಬೆದರಿಕೆಯೊಡ್ಡಿದ ಆರೋಪಿ ಪಿಎಫ್‌ಐ ಸದಸ್ಯ

ಕಚೇರಿಗೆ ಕರೆ ಮಾಡಿ 100 ಕೋ.ರೂ. ಕೇಳಿದ್ದ ಆರೋಪಿ

ಹೊಸದಿಲ್ಲಿ : ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದ ವ್ಯಕ್ತಿ ದಾವೂದ್ ಇಬ್ರಾಹಿಂ ಗ್ಯಾಂಗ್, ಲಷ್ಕರ್-ಎ-ತೊಯ್ಬಾ, ಪಿಎಫ್ಐಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕರೆ ಮಾಡಿದ ವ್ಯಕ್ತಿಯನ್ನು ಜಯೇಶ್ ಪೂಜಾರಿ ಅಲಿಯಾಸ್ ಕಂಥಾ, ಅಲಿಯಾಸ್ ಸಲೀಮ್ ಶಾಹಿರ್ ಕಾಂತ ಎಂದು ಗುರುತಿಸಲಾಗಿದ್ದು, ಈತ ಕೊಲೆಯ ಪ್ರಕರಣದ ಅಪರಾಧಿಯಾಗಿದ್ದಾನೆ. ಜನವರಿ ಹಾಗೂ ಮಾರ್ಚ್ ತಿಂಗಳಲ್ಲಿ ಗಡ್ಕರಿ ಅವರ ಕಚೇರಿಗೆ ಈತ ಕರೆ ಮಾಡಿ ಬೆದರಿಕೆ ಹಾಕಿದ್ದ.
ಆರೋಪಿಗೆ ದಾವೂದ್ ಗ್ಯಾಂಗ್, ಪಿಎಫ್‌ಐ ಮತ್ತು ಎಲ್‌ಇಟಿಯೊಂದಿಗೆ ಸಂಪರ್ಕವಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಹೇಳಿದ್ದಾರೆ. ಜ.14 ರಂದು ಗಡ್ಕರಿ ಕಚೇರಿಗೆ ಕರೆ ಮಾಡಿ ದಾವೂದ್ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡು 100 ಕೋಟಿ ರೂಗಳಿಗೆ ಬೇಡಿಕೆ ಇಟ್ಟಿದ್ದ.

















































error: Content is protected !!
Scroll to Top