ಬಾಲ್ಯದ ಮುಗ್ಧತೆ ಜೀವನ ನಿರ್ದೇಶಿಸುತ್ತದೆ: ಜ್ಯೋತಿ ಗುರುಪ್ರಸಾದ್

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್‌ನಲ್ಲಿ ಬೇಸಿಗೆ ಶಿಬಿರ

ಕಾರ್ಕಳ: ಬಾಲ್ಯ ಎನ್ನುವುದು ಒಂದು ಅಮೂಲ್ಯ ಘಟ್ಟ. ಅದು ನಮ್ಮ ಮುಗ್ಧ ಲೋಕದ ಮೂಲಕ ನಮ್ಮ ಇಡೀ ಜೀವನವನ್ನೇ ನಿರ್ದೇಶಿಸುತ್ತದೆ ಎಂದು ಖ್ಯಾತ ಸಾಹಿತಿ ಶ್ರೀಮತಿ ಜ್ಯೋತಿ ಗುರುಪ್ರಸಾದ್ ಹೇಳಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್‌ನಲ್ಲಿ ಆಯೋಜಿಸಿದ್ದ ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ ಬೇಸಿಗೆ ಶಿಬಿರ ಕಲಾ ಸಿಂಚನದಲ್ಲಿ ನನ್ನ ಬಾಲ್ಯ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಅಜ್ಜಿಯ ಜತೆಗೆ ತಿರುಗಾಡುತ್ತ ನದಿಯಲ್ಲಿ ಮೀಯುವುದನ್ನು ಕಲಿತೆ. ಪ್ರೈಮರಿ ಶಾಲೆ ಮೇಷ್ಟ್ರಾಗಿದ್ದ ತಾತನಿಂದ ನೇರ ನಡೆನುಡಿಯ ಪ್ರಾಮಾಣಿಕತೆಯನ್ನು, ಉಳಿತಾಯದ ಮಹತ್ವವನ್ನು ಕಲಿತೆ. ಡಾ.ರಾಜಕುಮಾರರ ಸಿನಿಮಾಗಳು ನನ್ನ ಬಾಲ್ಯದ ಮನೋರಂಜನೆಯ ಭಾಗವಾಗಿ ನನ್ನನ್ನು ಸಾಂಸ್ಕೃತಿಕವಾಗಿ ಗಟ್ಟಿಗೊಳಿಸಿದವು. ಹಾಗೆಯೇ ಅಮ್ಮ ಕೇಳುತ್ತಿದ್ದ ರೇಡಿಯೊ ಹಾಡು, ಸ್ನೇಹಿತರೊಡನೆ ಆಡುತ್ತಿದ್ದ ಮರಳಿನಲ್ಲಿ ಕಪ್ಪೆಗೂಡು ಕಟ್ಟುವ ಆಟ, ಜಗಲಿ ಹಾರುವುದು, ಓಡುವ ಜಿಗಿಯುವ ಆಟ, ಘಟ್ಟದ ಮನೆ ಆಟ ಅಥವಾ ಚೌಕಾಬಾರ ಆಟ, ಲೈಬ್ರರಿಯಿಂದ ತಂದು ಓದುತ್ತಿದ್ದ ಅಮರಚಿತ್ರ ಕಥೆಗಳು ನನ್ನ ಬಾಲ್ಯದ ಸಮೃದ್ಧ ಕ್ಷಣಗಳು ಎಂದು ತನ್ನ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಪ್ರಜ್ವಲ್ ಆಚಾರ್ಯ,ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ಪ್ರತಿಮಾ ದೇವದಾಸ್ ಸ್ವಾಗತಿಸಿ ಪರಿಚಯಿಸಿದರು. ಶಿಬಿರದ ನಿರ್ದೇಶಕರಾದ ಚಂದ್ರನಾಥ ಬಜಗೋಳಿ ನಿರೂಪಿಸಿ ವಂದಿಸಿದರು.

















































error: Content is protected !!
Scroll to Top