ಕಾರುಗಳ ಡಿಕ್ಕಿ : ಚಾಲಕರು ಪಾರು

ಕಾರ್ಕಳ : ಕಾರ್ಕಳ ತಾಲೂಕು ಕಸಬಾ ಗ್ರಾಮದ ನಿವಾಸಿ ನಾಜ್ನಿನ್‌ ಮೊಹಮ್ಮದ್‌ ಆರೀಫ್‌ ಕಾರಿನಲ್ಲಿ ಕಾರ್ಕಳ ಪೇಟೆಗೆ ತೆರಳುತ್ತಿದ್ದ ವೇಳೆ, ಸಾಲ್ಮರ ಸುನೀತಾ ಮೋಟಾರ್ಸ್‌ ಎದುರು ಜೋಡುರಸ್ತೆ ಕಡೆಗೆ ಹೋಗಲು ಕಾರನ್ನು ತಿರುಗಿಸುತ್ತಿದ್ದಾಗ, ಜೋಡುರಸ್ತೆ ಕಡೆಯಿಂದ ಮೊಹಮ್ಮದ್‌ ಆಝಮ್‌ ಎಂಬವರು ಚಲಾಯಿಸಿಕೊಂಡು ಬಂದ ಕಾರು ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ಕಾರಿನ ಹಿಂಭಾಗ ಹಾಗೂ ಮುಂಭಾಗ ಡಿವೈಡರ್‌ ತಾಗಿ ಜಖಂಗೊಂಡಿರುತ್ತದೆ. ಈ ಅಪಘಾತದಿಂದ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಡಿಕ್ಕಿ: ಪಾದಚಾರಿ, ಸವಾರನಿಗೆ ಗಾಯ

ಅಜೆಕಾರು : ಅಶೋಕ ನಗರ ಕಡ್ತಲ ಗ್ರಾಮದ ಗಣೇಶ ಎಂಬವರು ಶುಕ್ರವಾರ ಸಂಜೆ ಮನೆಯಿಂದ ಅಂಗಡಿಗೆ ಹೋಗಿ ವಾಪಾಸ್ಸು ಮನೆಗೆ ದೊಂಡೇರಂಗಡಿ-ಕಡ್ತಲ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ, ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. ಕಡ್ತಲ ಕಡೆಯಿಂದ ಬಂದ ಬೈಕ್‌ ನಡೆದುಕೊಂಡು ಹೋಗುತ್ತಿದ್ದ ಗಣೇಶ ಅವರಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು, ಇಬ್ಬರೂ ಗಾಯಗೊಂಡಿದ್ದಾರೆ. ಸ್ಥಳೀಯ ಜನರು ಇಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಗಣೇಶ ಅವರ ಎಡ ಕಾಲಿಗೆ, ಹಣೆಗೆ ಗಾಯವಾಗಿದ್ದು, ಬೈಕ್ ಸವಾರನಿಗೂ ಸಣ್ಣಪುಟ್ಟ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ಉಡುಪಿ ಅಜ್ಜರಕಾಡು ಆಸ್ವತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ. ಈ ಕುರಿತು ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









































































































error: Content is protected !!
Scroll to Top