ಕಾರ್ಕಳ : ಅತ್ತೂರು ಪರ್ಪಲೆ ಗಿರಿ ಕ್ಷೇತ್ರಕ್ಕೆ ದಾನಿಯೊಬ್ಬರು ಕೊಡುಗೆಯಾಗಿ ನೀಡಿದ ಹೈಮಾಸ್ಟ್ ದೀಪವನ್ನು ರಾಮನವಮಿಯ ದಿನದಂದು ಉದ್ಘಾಟಿಸಲಾಯಿತು. ಮಾ. 30ರಂದು ಬಾಲಾಜಿ ಶಿಬಿರದ ಗುರುಸ್ವಾಮಿ ಬಾಲಕೃಷ್ಣ ಹೆಗ್ಡೆ ಅವರು ಹೈಮಾಸ್ಟ್ ದೀಪ ಪ್ರಜ್ವಲಿಸಿದರು. ಅತ್ತೂರು ಕ್ಷೇತ್ರದ ಟ್ರಸ್ಟಿಗಳಾದ ಪ್ರಶಾಂತ್ ನಾಯಕ್, ಚಂದ್ರಶೇಖರ್ ಶೆಟ್ಟಿ, ಪುನರತ್ಥಾನ ಸಮಿತಿಯ ಸದಸ್ಯರಾದ ಬೋಳ ಪ್ರಶಾಂತ್ ಕಾಮತ್, ನಿತ್ಯಾನಂದ ಪೈ, ಹಿಂ.ಜಾ.ವೇ ಸಂಘಟನೆಯ ಪ್ರಮುಖರಾದ ಪ್ರಕಾಶ್ ಕುಕ್ಕೆಹಳ್ಳಿ, ರಮೇಶ್ ಕಲ್ಲೊಟ್ಟೆ, ರಮೇಶ್ ಅಯೋಧ್ಯಾನಗರ, ಗುರುಪ್ರಸಾದ್ ನಾರಾವಿ, ಸಂಘಟನೆಯ ಕಾರ್ಯಕರ್ತರು ಹಾಗೂ ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪರ್ಪಲೆಗಿರಿಗೆ ಹೈಮಾಸ್ಟ್ ದೀಪ ಕೊಡುಗೆ






























































