ಕಲಾವಿದರಿಗೆ ಹಣ ಎಸೆದ ಡಿಕೆಶಿ : ಪ್ರಕರಣ ದಾಖಲು

ಚುನಾವಣೆ ದಿನಾಂಕ ಪ್ರಕಟವಾಗುವ ಮೊದಲು ನಡೆದ ಘಟನೆ

ಬೆಂಗಳೂರು: ಪ್ರಜಾಧ್ವನಿ ಯಾತ್ರೆ ವೇಳೆ ಕಲಾವಿದರಿಗೆ ಹಣ ಎಸೆದಿರುವ ಕಾಂಗ್ರೆಸ್‌ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ವಿರುದ್ಧ ದಂಡನಾರ್ಹವಲ್ಲದ ಅಪರಾಧ ಪ್ರಕರಣ ದಾಖಲಾಗಿದೆ.
ಆಯೋಗ ಚುನಾವಣೆಗೆ ಚುನಾವಣಾ ದಿನಾಂಕ ಪ್ರಕಟಿಸುವ ಮೊದಲು ಮಂಗಳವಾರ ಮಂಡ್ಯ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೀಗಾಗಿ ಇದು ನೀತಿಸಂಹಿತೆ ಉಲ್ಲಂಘನೆ ವ್ಯಾಪ್ತಿಗೆ ಬರುವುದಿಲ್ಲ ಎನ್ನಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಕಲಾವಿದರಿಗೆ ಹಣ ಎಸೆದಿದ್ದಾರೆ ಎಂದು ದೂರು ದಾಖಲಿಸಲಾಗಿದೆ.
ಪಕ್ಷದ ಪ್ರಚಾರದ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಕಲಾವಿದರಿಗೆ ಮಾತ್ರ ಶಿವಕುಮಾರ್ ಹಣ ನೀಡಿದ್ದಾರೆ ಹಣ ಎಸೆದಿಲ್ಲ. ಚುನಾವಣೆ ದಿನಾಂಕ ಘೋಷಣೆಯಾಗುವುದಕ್ಕೂ ಮುಂಚೆ ಈ ಘಟನೆ ನಡೆದಿದೆ ಎಂದು ಕಾಂಗೆಸ್‌ ನಾಯಕರು ಹೇಳಿದ್ದಾರೆ.









































































































error: Content is protected !!
Scroll to Top