ರಾಷ್ಟ್ರೀಯ ಸೇವಾ ಯೋಜನೆಯಿಂದ ವ್ಯಕ್ತಿತ್ವ ವಿಕಸನ – ಕೆ. ಪಿ. ಶೆಣೈ

ಕಾರ್ಕಳ : ರಾಷ್ಟ್ರೀಯ ಸೇವಾ ಯೋಜನಾ ಶಿಬಿರದಿಂದಾಗಿ ವಿದ್ಯಾರ್ಥಿಗಳಲ್ಲಿ ಸಾಮರಸ್ಯ, ಸಹಬಾಳ್ವೆ, ಹೊಂದಾಣಿಕೆ, ನೈತಿಕತೆ, ಸೇವಾ ಮನೋಭಾವ ಹಾಗೂ ಶಿಸ್ತುಬದ್ಧ ಜೀವನದೊಂದಿಗೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ಎಸ್.ವಿ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಕೆ. ಪಿ. ಶೆಣೈ ಅಭಿಪ್ರಾಯಪಟ್ಟರು. ಅವರು ಮಾ. 24 ರಿಂದ 30 ರವರೆಗೆ ಎಳ್ಳಾರೆಯ ಮಹತೋಭಾರ ಇರ್ವತ್ತೂರು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ನಡೆಯುವ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಟ್ರಸ್ಟ್‌ನ ಉಪಾಧ್ಯಕ್ಷ ಎನ್.‌ ಗಣೇಶ್‌ ಕಾಮತ್‌ ಭಿತ್ತಿಪತ್ರವನ್ನು ಅನಾವರಣಗೊಳಿಸಿದರು. ಕಡ್ತಲ ಗ್ರಾ. ಪಂ. ಅಧ್ಯಕ್ಷೆ ಮಾಲತಿ ದಿನೇಶ್‌ ಕುಲಾಲ್‌ ಶ್ರಮದಾನಕ್ಕೆ ಚಾಲನೆ ನೀಡಿದರು. ಟ್ರಸ್ಟ್‌ನ ಕೋಶಾಧ್ಯಕ್ಷ ಐ. ರವೀಂದ್ರ ಪೈ ಮಾತನಾಡಿ ಶುಭಹಾರೈಸಿದರು. ಕಾಲೇಜು ಪ್ರಾಂಶುಪಾಲೆ ಉಷಾ ನಾಯಕ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಮೊಕ್ತೇಸರ ಯೋಗೀಶ್‌ ಮಲ್ಯ, ಶ್ರೀ ಲಕ್ಷ್ಮೀ ಜನಾರ್ಧನ ಭಜನಾ ಮಂಡಳಿ ಸಂಸ್ಥಾಪಕ ದೇವೇಂದ್ರ ಕಾಮತ್‌ ಎಳ್ಳಾರೆ, ಎನ್‌ಎಸ್‌ಎಸ್‌ ಘಟಕದ ನಾಯಕಿಯರಾದ ಶರಣ್ಯ, ಸ್ವಾತಿ, ಶೈಲಾಪ್ರೀತಿ, ಹೇಮಲತಾ, ಅತೀಕ್ಷಾ ಹಾಗೂ ಪ್ರತೀಕ್ಷಾ ಉಪಸ್ಥಿತರಿದ್ದರು. ಶ್ರೀನಿಧಿ ನಾಯಕ್‌ ಕಾರ್ಯಕ್ರಮ ನಿರೂಪಿಸಿ, ಶಿಬಿರಾಧಿಕಾರಿ ಪದ್ಮಜಾ ವಂದಿಸಿದರು.









































































































error: Content is protected !!
Scroll to Top