ಕಳ್ಳತನವಾದ ದನಗಳನ್ನು ಕೆಲವೇ ಗಂಟೆಯಲ್ಲಿ ಪತ್ತೆ ಹಚ್ಚಿದ ಕಾರ್ಕಳ ಪೊಲೀಸರು

ದನಕಳ್ಳರಿಗಾಗಿ ತೀವ್ರ ಶೋಧ

ಕಾರ್ಕಳ : ಕೇವಲ ಎರಡೇ ಗಂಟೆಯಲ್ಲಿ ಕಳ್ಳತನವಾಗಿರುವ ದನಗಳನ್ನು ಪತ್ತೆ ಮಾಡುವ ಮೂಲಕ ಕಾರ್ಕಳ ಪೊಲೀಸರು ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಾರ್ಕಳ ತೆಳ್ಳಾರು ರಸ್ತೆಯ ಪುಷ್ಪಾ ಎಂಬವರು ಮಾ. 24ರಂದು ಹಟ್ಟಿಯಿಂದ 4 ದನಗಳನ್ನು ಮೇಯಲು ಬಿಟ್ಟಿದ್ದು ಅವುಗಳ ಪೈಕಿ 15 ಸಾವಿರ ಮೌಲ್ಯದ ಕಂದು ಬಿಳಿ ಬಣ್ಣದ ಒಂದು ದನ ಹಾಗೂ 5 ಸಾವಿರ ರೂ. ಮೌಲ್ಯದ ಒಂದು ಕರು ರಾತ್ರಿಯಾದರು ವಾಪಾಸ್‌ ಹಟ್ಟಿಗೆ ಬಂದಿರುವುದಿಲ್ಲ. ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ.
ಮಾ. 25ರ ಬೆಳಗ್ಗಿನ ಜಾವ 3 ಗಂಟೆಯ ಸುಮಾರಿಗೆ ರಸ್ತೆಯ ಬದಿಯಲ್ಲಿ ಮಲಗಿಕೊಂಡಿದ್ದ ದನ ಕರುವನ್ನು ಯಾರೊ ಕಳ್ಳರು ಹಿಡಿದು ವಾಹನದಲ್ಲಿ ತುಂಬಿಸಿ ಸಾಗಿಸಿರುವುದನ್ನು ಸ್ಥಳೀಯರಾದ ರಾಜೇಂದ್ರ ಅಮೀನ್‌ ಎಂಬುವರು ನೋಡಿರುತ್ತಾರೆ. ಈ ಕುರಿತು ಮಾಹಿತಿ ಪಡೆದ ಕಾರ್ಕಳ ನಗರ ಠಾಣೆಗೆ ಪೊಲೀಸರು ಕಳ್ಳರ ಪತ್ತೆಗಾಗಿ ಶೋಧ ಕಾರ್ಯ ನಡೆಸಿರುತ್ತಾರೆ. ಮಂಗಳೂರು ಉಲಾಯಿಬೆಟ್ಟು ಗ್ರಾಮದ ಬೊರ್ಗುಡ್ಡೆ ಪ್ರದೇಶಕ್ಕೂ ದಾಳಿ ನಡೆಸಿರುತ್ತಾರೆ. ಈ ವೇಳೆ ತೆಳ್ಳಾರಿನಿಂದ ಕಳ್ಳತನವಾಗಿರುವ ದನ ಕರು ಪತ್ತೆಯಾಗಿದೆ. ಬಳಿಕ ಅವುಗಳನ್ನು ವಾರಿಸುದಾರರಿಗೆ ಹಸ್ತಾಂತರಿಸಲಾಗಿದೆ. ಡಿವೈಎಸ್‌ಪಿ ಅರವಿಂದ್‌ ಎನ್.‌ ಕಲಗುಜ್ಜಿ ಹಾಗೂ ಇನ್ಸ್‌ಪೆಕ್ಟರ್ ಲೊಕೇಶ್‌ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಎಸ್‌ಐ ಪ್ರಸನ್ನ ಅವರ ತಂಡ ಕಾರ್ಯಾಚರಣೆ ನಡೆಸಿತ್ತು. ಅಜೆಕಾರು ಪೊಲೀಸ್‌ ಠಾಣೆಯ ಪ್ರದೀಪ್‌ ಶೆಟ್ಟಿ, ಕಾರ್ಕಳ ನಗರ ಠಾಣೆಯ ರಂಜಿತ್‌ ಶೆಟ್ಟಿ ಹಾಗೂ ಘನಶ್ಯಾಮ್‌ ಕಾರ್ಯಾಚರಣೆಯಲ್ಲಿದ್ದರು.





























































































































error: Content is protected !!
Scroll to Top