ಕ್ರಿಯೇಟಿವ್‌ ಕಾಲೇಜಿನಲ್ಲಿ ಸಾಹಿತ್ಯ – ಸಾಂಗತ್ಯ ಸರಣಿ

ಸಾಹಿತ್ಯದ ರಸಭಾವ ಅರಿತರೆ ಬದುಕಿಗೆ ದಾರಿದೀಪ – ಮುನಿರಾಜ ರೆಂಜಾಳ

ಕಾರ್ಕಳ : ಸಾಹಿತ್ಯ ಎನ್ನುವುದು ಸರ್ವವ್ಯಾಪಿಯಾದುದು. ಸಾಹಿತ್ಯದ ರಸಭಾವಗಳನ್ನು ಅರಿತರೆ ಬದುಕಿಗೆ ದಾರಿದೀಪವಾಗುವುದು, ಮನಸ್ಸಿಗೆ ತೃಪ್ತಿ ದೊರೆಯುವುದು ಎಂದು ಧಾರ್ಮಿಕ ಚಿಂತಕ ಮುನಿರಾಜ ರೆಂಜಾಳ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಹಿರ್ಗಾನ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ ಸಾಂಗತ್ಯ ಸರಣಿ ಕಾರ್ಯಕ್ರಮದಲ್ಲಿ ಉಪನ್ಯಾನ ನೀಡಿ, ಜೀವನದಲ್ಲಿ ಸಾಹಿತ್ಯ ಮತ್ತು ನೈತಿಕ ಮೌಲ್ಯಗಳಿಗೆ ತೆರೆದುಕೊಂಡಾಗ ಹೊಸ ದೃಷ್ಟಿ ಗೋಚರಿಸುವುದು. ವಿದ್ಯಾರ್ಥಿಗಳು ಸುಂದರ ಭವಿಷ್ಯಕ್ಕಾಗಿ ಸತತ ಪ್ರಯತ್ನ ಮತ್ತು ಮೌಲಿಕ ಗ್ರಂಥಗಳ ಅಧ್ಯಯನ ನಡೆಸಬೇಕು. ರನ್ನ, ಪಂಪ, ನಾಗಚಂದ್ರ, ಕುವೆಂಪು, ಡಿ.ವಿ.ಜಿಯವರ ಸಾಹಿತ್ಯದ ಅಭ್ಯಾಸ ನಡೆಸಬೇಕು ಎಂದರು.
ಕ್ರಿಯೇಟಿವ್, ಪ.ಪೂ. ಕಾಲೇಜಿನ ಪ್ರಾಂಶುಪಾಲ ವಿದ್ವಾನ್‌ ಗಣಪತಿ ಭಟ್, ಉಪನ್ಯಾಸಕ ವೃಂದದವರು, ವಸತಿ ನಿಲಯ ಪಾಲಕರು, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿಗಳು ಪಿ.ಆರ್.ಒ ಲಿಶನ್‍ ಗೌಡ ಉಪಸ್ಥಿತರಿದ್ದರು. ಸಂಸ್ಥಾಪಕ ಅಶ್ವಥ್‌ ಎಸ್.ಎಲ್. ಸ್ವಾಗತಿಸಿ, ಉಪನ್ಯಾಸಕ ರಾಮಕೃಷ್ಣಹೆಗಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.











































error: Content is protected !!
Scroll to Top