ಕಾರ್ಕಳ : ಬಜಗೋಳಿ ಗಣಪತಿಕಟ್ಟೆ ದಿಡಿಂಬಿರಿ ನಿವಾಸಿ ರಂಗಿತಾ(23) ಎಂಬವರು ತನ್ನ ಮೂರು ವರುಷದ ಮಗಳಾದ ಶಾನ್ವಿಕಳೊಂದಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಮನೆ ಬಿಟ್ಟು ಹೋದಕಾರಣ ಇನ್ನು ತಿಳಿದು ಬಂದಿಲ್ಲ. 150ಸೆಂ.ಮೀ. ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಕೋಲು ಮುಖ, ಸಪೂರ ಶರೀರ ಹೊಂದಿದ್ದು, ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ತಿಳಿಸಲಾಗಿದೆ.
ಬಜಗೋಳಿ ತಾಯಿ ಮಗು ನಾಪತ್ತೆ















































