ಸೈಕಲ್‌ನಲ್ಲಿ ಅಖಿಲ ಭಾರತ ತೀರ್ಥಯಾತ್ರೆ ಮಾಡುತ್ತಿರುವ 71 ವರ್ಷದ ಅಶೋಕ್ ಶರ್ಮಾ ಜಿ.

ಕಾರ್ಕಳದಲ್ಲಿ ಅವರನ್ನು ಸ್ವಾಗತಿಸಿ ಶುಭಹಾರೈಸಿದ ನ್ಯಾಯವಾದಿ ಎಂ. ಕೆ. ವಿಪುಲ್

ಕಾರ್ಕಳ : ಸೈಕಲ್‌ನಲ್ಲಿ ಅಖಿಲ ಭಾರತ ತೀರ್ಥಯಾತ್ರೆ ಮಾಡುತ್ತಿರುವ 71 ವರ್ಷದ ಅಶೋಕ್ ಶರ್ಮಾ ಜಿ. ಅವರು ಉಡುಪಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿರುವ ಸಂದರ್ಭ ಕಾರ್ಕಳದಲ್ಲಿ ಮಾ. 1 ರಂದು ನ್ಯಾಯವಾದಿ ಎಂ. ಕೆ. ವಿಪುಲ್‌ ಸ್ವಾಗತಿಸಿ ಶುಭಹಾರೈಸಿದರು.

ಅಶೋಕ್ ಶರ್ಮಾ ಜಿ. ಅವರು 2 ವರ್ಷಗಳ ಹಿಂದೆ ತಮ್ಮ ಹುಟ್ಟೂರಾದ ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಸಂಚರಿಸಿ ಪ್ರಸ್ತುತ ಕರ್ನಾಟಕದಲ್ಲಿದ್ದಾರೆ. ಇಲ್ಲಿಂದ ಕೇರಳಕ್ಕಾಗಿ ಭಾರತದ ದಕ್ಷಿಣ ತುದಿಯಲ್ಲಿರುವ ಪವಿತ್ರ ಕ್ಷೇತ್ರವಾದ ರಾಮೇಶ್ವರಗೆ ಹೋಗಿ ಮರಳಿ ಆಂಧ್ರ, ತೆಲಂಗಾಣ, ಒರಿಸ್ಸಾ ಛತ್ತೀಸ್‌ಗಡ್‌, ಜಾರ್ಖಂಡ್ ಆಗಿ ತಮ್ಮ ಹುಟ್ಟೂರಿಗೆ ವಾಪಸ್ ಹಿಂದಿರುಗುವ ಗುರಿ ಹೊಂದಿದ್ದಾರೆ. ಅಯೋಧ್ಯೆ, ಕಾಶಿ, ಕೇದಾರನಾಥ, ಬದರಿನಾಥ, ವೈಷ್ಣವ ದೇವಿ, ಅಮೃತಸರ, ದ್ವಾರಕಾ ಮುಂತಾದ ಸ್ಥಳಗಳಿಗೆ ಇವರು ಭೇಟಿ ನೀಡಿರುತ್ತಾರೆ.





























































































error: Content is protected !!
Scroll to Top