ಜೋಯ್‌ ಅಲುಕ್ಕಾಸ್‌ನ 300 ಕೋ. ರೂ. ಆಸ್ತಿ ಇ.ಡಿ. ವಶ

ಹವಾಲ ಮೂಲಕ ವಿದೇಶಕ್ಕೆ ಹಣ ರವಾನೆ ಆರೋಪ

ತೃಶ್ಶೂರ್ : ದೇಶಾದ್ಯಂತ ಶಾಖೆಗಳನ್ನು ಹೊಂದಿರುವ ಕೇರಳದ ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಜೋಯ್‌ ಅಲುಕ್ಕಾಸ್‌ನ 300 ಕೋ. ರೂ. ಅಧಿಕ ಸೊತ್ತುಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ.) ವಶಪಡಿಸಿಕೊಂಡಿದೆ. ಹವಾಲ ಮಾರ್ಗದಲ್ಲಿ ದುಬೈಗೆ ಅಪಾರ ಪ್ರಮಾಣದ ಹಣ ವರ್ಗಾವಣೆ ಪ್ರಕರಣ ಮಾಡಿದ ಆರೋಪ ಜೋಯ್‌ ಅಲುಕ್ಕಾಸ್‌ ಮೇಲಿದೆ. ಸಂಸ್ಥೆಯ ಮಾಲೀಕ ಅಲುಕ್ಕಾಸ್ ವರ್ಗೀಸ್ ಅವರ ರೂ. 305 ಕೋಟಿಗೂ ಅಧಿಕ ಮೊತ್ತದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಡಿ ತಿಳಿಸಿದೆ.
ತೃಶ್ಶೂರ್‌ನಲ್ಲಿರುವ ಕೇಂದ್ರ ಕಚೇರಿ ಸಂಕೀರ್ಣದಲ್ಲಿ ಫೆ.22 ರಂದು ಇ.ಡಿ. ಶೋಧ ಕಾರ್ಯಾಚರಣೆ ನಡೆಸಿದ್ದು, ಶೋಭಾ ಸಿಟಿಯಲ್ಲಿನ ಭೂಮಿ ಮತ್ತು ವಸತಿ ಕಟ್ಟಡ ಸೇರಿದಂತೆ ರೂ. 81.54 ಮೊತ್ತದ 33 ಸ್ಥಿರಾಸ್ತಿ ಮತ್ತು ಮೂರು ಬ್ಯಾಂಕ್ ಅಕೌಂಟ್‌ಗಳಲ್ಲಿರುವ ರೂ.91. 22 ಲಕ್ಷ, ರೂ.5.58 ಕೋಟಿ ಮೊತ್ತದ ಮೂರು ಸ್ಥಿರ ಠೇವಣಿ ಮತ್ತು ಜೋಯ್‌ ಅಲುಕ್ಕಾಸ್ ಕಂಪನಿಗೆ ಸೇರಿದ ರೂ, 217.80ಕೋಟಿ ಮೊತ್ತದ ಷೇರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಡಿ ತಿಳಿಸಿದೆ.
ರೂ. 305.84 ಕೋಟಿ ಮೊತ್ತದ ಈ ಎಲ್ಲ ಆಸ್ತಿಯನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ಸೆಕ್ಷನ್ 37ಎ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಮಾಹಿತಿ ನೀಡಿದೆ.



























































































































error: Content is protected !!
Scroll to Top