ಅಗ್ನಿವೀರರ ಹೊಸ ನೇಮಕಾತಿ ನಿಯಮ : ಪ್ರವೇಶ ಪರೀಕ್ಷೆ ನಂತರವೆ ಆಯ್ಕೆ

ನವದೆಹಲಿ : ಅಗ್ನಿಪಥ ಯೋಜನೆಯಡಿ ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿರುವುದಾಗಿ ಭಾರತೀಯ ಸೇನೆ ಘೋಷಿಸಿದೆ. ಇದರಂತೆ ಅಗ್ನಿವೀರರಾಗಿ ನೇಮಕಗೊಳ್ಳಲು ಬಯಸುವ ಅಭ್ಯರ್ಥಿಗಳು ಮೊದಲು ಆನ್​ಲೈನ್ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಬೇಕಾಗುತ್ತದೆ. ನಂತರ ದೈಹಿಕ ಕ್ಷಮತೆ ಪರೀಕ್ಷೆ ಹಾಗೂ ನೇಮಕಾತಿಗೂ ಮುನ್ನ ನಡೆಸುವ ವೈದ್ಯಕೀಯ ಪರೀಕ್ಷೆಗಳು ನಡೆಯಲಿವೆ. ಈ ವಿಚಾರವಾಗಿ ಸೇನೆಯು ಶುಕ್ರವಾರ ಜಾಹೀರಾತು ಬಿಡುಗಡೆ ಮಾಡಿದ್ದು, ಅಗ್ನಿವೀರರ ನೇಮಕಕ್ಕೆ ಸಂಬಂಧಿಸಿದ ಮೂರು ಹಂತಗಳ ಬಗ್ಗೆ ವಿವರಣೆ ನೀಡಿದೆ. ಈ ಹಿಂದೆ ಅಗ್ನಿವೀರರ ನೇಮಕ ಪ್ರಕ್ರಿಯೆ ಭಿನ್ನವಾಗಿತ್ತು. ಅಭ್ಯರ್ಥಿಗಳು ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಿತ್ತು. ನಂತರ ದೈಹಿಕ ಕ್ಷಮತೆ ಪರೀಕ್ಷೆಗೆ ಒಳಗಾಗಬೇಕಿತ್ತು. ಅದಾದ ಮೇಲೆ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಬೇಕಿತ್ತು.
ಇದುವರೆಗೆ 19,000 ಅಗ್ನಿವೀರರು ಸೇನೆ ಸೇರಿದ್ದು, 21,000 ಮಂದಿ ಮಾರ್ಚ್ ಮೊದಲ ವಾರ ಸೇನೆ ಸೇರಲಿದ್ದಾರೆ. ಹೊಸ ನೇಮಕಾತಿ ನಿಯಮ 2023-24ರಲ್ಲಿ ಸೇನೆ ಸೇರ ಬಯಸುವ 40,000 ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಆಕಾಂಕ್ಷಿಗಳ ಸಂಖ್ಯೆಯಲ್ಲಿ ಆಯಾ ಪ್ರದೇಶಕ್ಕನುಗುಣವಾಗಿ ವ್ಯತ್ಯಾಸವಿರುತ್ತದೆ. ಇದು ದೊಡ್ಡ ನಗರಗಳಲ್ಲಿ 1.5 ಲಕ್ಷದವರೆಗೆ ಇದ್ದರೆ ಸಣ್ಣ ನಗರಗಳಲ್ಲಿ 5,000 ವರೆಗೆ ಇರುತ್ತದೆ ಎಂದು ಮೂಲಗಳು ತಿಳಿಸಿವೆ.









































































































error: Content is protected !!
Scroll to Top