ನಾಳೆ ಕ್ರಿಕೆಟಿಗ ರಾಹುಲ್‌- ನಟಿ ಅಥಿಯಾ ಶೆಟ್ಟಿ ಮದುವೆ

ಮುಂಬಯಿ, ಬೆಂಗಳೂರಿನಲ್ಲಿ ಅರತಕ್ಷತೆ

ಮುಂಬಯಿ : ಮಂಗಳೂರು ಮೂಲದ ಕ್ರಕೆಟಿಗ ಕೆ. ಎಲ್‌. ರಾಹುಲ್‌ ಮತ್ತು ಬಾಲಿವುಡ್‌ ನಟ ಸುನಿಲ್‌ ಶೆಟ್ಟಿಯವರ ಪುತ್ರಿ ಅಥಿಯಾ ಶೆಟ್ಟಿ ವಿವಾಹ ಸೋಮವಾರ ನೆರವೇರಲಿದೆ. ಮುದುವೆ ಸಂಭ್ರಮ ಈಗಾಗಲೇ ಆರಂಭವಾಗಿದ್ದು, ಶನಿವಾರ ಆಪ್ತರಿಗೆ ಮತ್ತು ಕುಟುಂಬದವರಿಗೆ ಕಾಕ್‌ಟೈಲ್‌ ಪಾರ್ಟಿ ಆಯೋಜಿಸಲಾಗಿತ್ತು. ಭಾನುವಾರ ಖಂಡಾಲದಲ್ಲಿ ಸುನಿಲ್‌ ಶೆಟ್ಟಿಯವರ ತೋಟದ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನೆರವೇರಲಿದೆ.
ಸೋಮವಾರ ತೋಟದಮನೆಯಲ್ಲೇ ಮದುವೆ ನೆರವೇರಲಿದೆ. ಬಾಲಿವುಡ್‌ ಮತ್ತು ಕ್ರಿಕೆಟ್‌ ಕ್ಷೇತ್ರದ ಗಣ್ಯರು ಮತ್ತು ಕುಟುಂಬ ವರ್ಗದವರಿಗೆ ಮಾತ್ರ ಮದುವೆಗೆ ಆಹ್ವಾನವಿದೆ. ವರ ಮತ್ತು ವಧು ಕರಾವಳಿ ಮೂಲದವರಾಗಿರುವುದರಿಂದ ಕರಾವಳಿಯ ವಿಧಿವಿಧಾನದಂತೆ ಮದುವೆ ವಿಧಿಗಳು ನೆರವೇರಲಿವೆ.
ಅಥಿಯಾ ಮತ್ತು ರಾಹುಲ್‌ ಡೆಟಿಂಗ್‌ ಪ್ರಾರಂಭಿಸಿ ನಾಲ್ಕು ವರ್ಷವಾದರೂ ಅವರು ಅದನ್ನು ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಎರಡೂ ಮನೆಯವರು ಒಪ್ಪಿಯೇ ಮದುವೆ ನೆರವೇರಿಸಲಾಗುತ್ತಿದೆ.
ಮದುವೆ ಬಳಿಕ ರಾಹುಲ್‌ ಮತ್ತು ಅಥಿಯಾ ಸ್ನೇಹಿತರು, ಬಂಧು ಬಳಗಕ್ಕಾಗಿ ಮುಂಬಯಿ ಮತ್ತು ಬೆಂಗಳೂರಿನಲ್ಲಿ ವೈಭವದ ಅರತಕ್ಷತೆ ನಡೆಯಲಿದೆ.

















































error: Content is protected !!
Scroll to Top