ಕಾರ್ಕಳ : ಜನವರಿ 21ರಿಂದ 29ರವರೆಗೆ ನಡೆಯಲಿರುವ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಕಾರ್ಕಳ ನಗರ ಬಿಜೆಪಿ ಅಧ್ಯಕ್ಷರಾದ ರವೀಂದ್ರ ಮೊಯ್ಲಿಯವರು ನಗರದ 13ನೇ ವಾರ್ಡಿನ ಕಾಳಿಕಾಂಬ ಪರಿಸರದಲ್ಲಿ ಜ.21 ರಂದು ಪಕ್ಷದ ಪ್ಯಾಂಪ್ಲೇಟ್, ಪಕ್ಷದ ಸದಸ್ಯತನದ ನೋಂದಾವಣೆ, ಹಾಗೂ ಪರಶುರಾಮ ಥೀಮ್ ಪಾರ್ಕ್ ಆಮಂತ್ರಣ ನೀಡುವುದರ ಮೂಲಕ ಚಾಲನೆಯನ್ನು ನೀಡಿದರು.
ಈ ಸಂದರ್ಭ ವಾರ್ಡ್ ಅಧ್ಯಕ್ಷ ಹರೀಶ್ ದೇವಾಡಿಗ, ಮಂಡಲ ಕಾರ್ಯದರ್ಶಿ ಪ್ರಕಾಶ್ ರಾವ್ , ನಗರ ಪ್ರಧಾನ ಕಾರ್ಯದರ್ಶಿ ನಿರಂಜನ್ ಜೈನ್ ಪುರಸಭಾ ಸದಸ್ಯರಾದ ಪ್ರದೀಪ್ ರಾಣೆ, ನಾಮ ನಿರ್ದೇಶಕ ಸದಸ್ಯರಾದ ಸಂತೋಷ್ ರಾವ್, ದಿನೇಶ್ ರಾವ್, ಸತೀಶ್ ಆಚಾರ್ಯ ಪ್ರಸಾದ್ ಕೋಟ್ಯಾನ್, ನಾಗೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಪರಶುರಾಮ ಥೀಂ ಪಾರ್ಕ್ ಆಮಂತ್ರಣ ಪತ್ರಿಕೆ ಹಂಚಿಕೆಯೊಂದಿಗೆ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ





















