ಫೆ.10ರಿಂದ ಬಜೆಟ್‌ ಅಧಿವೇಶನ; 17ಕ್ಕೆ ಬಜೆಟ್‌ ಮಂಡನೆ

ಹಾಲಿ ಬಿಜೆಪಿ ಸರಕಾರದ ಕೊನೆಯ ಅಧಿವೇಶನ

ಬೆಂಗಳೂರು : ವಿಧಾನಮಂಡಲದ ಬಜೆಟ್ ಅಧಿವೇಶನ ಫೆ.10ರಂದು ಆರಂಭವಾಗಲಿದ್ದು, ಫೆ.17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ.ಇದು ಈಗ ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ಕೊನೆಯ ಬಜೆಟ್‌. ಮೇ ತಿಂಗಳಲ್ಲಿ ಚುನಾವಣೆ ನಡೆದು ಹೊಸ ಸರಕಾರಕ್ಕೆ ಅಧಿಅಕರಕ್ಕೆ ಬಂದ ಬಳಿಕ ಮತ್ತೊಮ್ಮೆ ಆಯವ್ಯಯ ಮಂಡನೆಯಾಗಲಿದೆ.
ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನಮಂಡಲ ಬಜೆಟ್ ಅಧಿವೇಶನ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರ ಭಾಷಣದೊಂದಿಗೆ ಪ್ರಾರಂಭವಾಗಲಿದೆ.
ಇದು ವರ್ಷದ ಮೊದಲ ಅಧಿವೇಶನವಾಗಿರುವುದರಿಂದ ರಾಜ್ಯಪಾಲರು ಫೆ.10 ರಂದು ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಫೆಬ್ರವರಿ 17 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ಬಜೆಟ್ ಅಧಿವೇಶನವನ್ನು 15 ದಿನಗಳ ಕಾಲ ನಡೆಸಲು ಸಂಪುಟವು ಚಿಂತನೆ ನಡೆಸಿದೆ. ಫೆಬ್ರವರಿ 16ರ ವರೆಗೆ ರಾಜ್ಯಪಾಲ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಶಾಸಕರ ಅಭಿಪ್ರಾಯಗಳ ಆಧಾರದ ಮೇಲೆ ವಿಧಾನಮಂಡಲದ ವ್ಯವಹಾರ ಸಲಹಾ ಸಮಿತಿಯು ಅಧಿವೇಶನದ ಅವಧಿಯನ್ನು ನಿರ್ಧರಿಸುತ್ತದೆ ಎಂದು ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ.











































error: Content is protected !!
Scroll to Top