ಸಮಾಜ ಸೇವಕ ಪ್ರಕಾಶ್ ರಾವ್ ಕಾಳಜಿ
ಕಾರ್ಕಳ : ನಗರದ ಅನಂತಶಯನ ರಸ್ತೆಯಲ್ಲಿ ಅನಂತಪದ್ಮನಾಭ ದೇವಸ್ಥಾನದ ರಥೋತ್ಸವ ಸಂದರ್ಭದಲ್ಲಿ ಅಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚದ ಕಾರಣ ವಾಹನ ಸವಾರರಿಗೆ ನಿತ್ಯ ತೊಂದರೆಯಾಗುತ್ತಿತ್ತು. ದ್ವಿಚಕ್ರ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೆ ಈ ಗುಂಡಿಗಳಿಗೆ ಬಿದ್ದು ಎದ್ದು ಹೋಗಬೇಕಾಗಿತ್ತು. ಆದರೆ ಈ ಬಗ್ಗೆ ಪುರಸಭೆ ಗಮನ ಹರಿಸದೆ ನಿರ್ಲಕ್ಷ್ಯ ತೋರಿಸಿತ್ತು.
ಸಾರ್ವಜನಿಕರಿಗೆ ಬಹಳ ಸಮಸ್ಯೆಯಾಗುತ್ತಿರುವುದನ್ನು ಗಮನಿಸಿದ ಸಮಾಜಸೇವಕ, ಪುರಸಭೆಯ ಮಾಜಿ ಸದಸ್ಯ ಪ್ರಕಾಶ್ ರಾವ್ ನೇತೃತ್ವದಲ್ಲಿ ಶ್ರಮಾದಾನ ಮಾಡಿ ರಸ್ತೆ ಗುಂಡಿಗಳಿಗೆ ಕಾಂಕ್ರೀಟ್ ಹಾಕಿಸಿದರು. ಇನ್ನಾದರು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಪುರಸಭೆ ಪ್ರತಿವರ್ಷದ ಈ ಸಮಸ್ಯಗೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬುದು ಜನರು ಆಗ್ರಹಸುತಿದ್ದಾರೆ ಎಂದು ಪ್ರಕಾಶ್ ರಾವ್ ಹೇಳಿದ್ದಾರೆ.























