ಧನ್ಯಶ್ರೀ ಆಚಾರ್ಯಗೆ ಶಕ್ತಿಕಲ್ಲು ಎತ್ತುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

ಕಾರ್ಕಳ : ಗುರುಪುರ ಗೋಳಿದಡಿ ಗುತ್ತುದ ವರ್ಷದ ಪರ್ಬ ಇದರ ಆಶ್ರಯದಲ್ಲಿ ಜ.18ರಂದು ನಡೆದ ಶಕ್ತಿಕಲ್ಲು ಎತ್ತುವ ಸ್ಪರ್ಧೆಯಲ್ಲಿ ಬೈಲೂರಿನ 19ರ ಹರೆಯದ ಯುವತಿ ಧನ್ಯಶ್ರೀ ಆಚಾರ್ಯ 45 ಕೆಜಿಯ ಕಲ್ಲನ್ನು ಎತ್ತಿ 50 ಸೆಕೆಂಡ್ ಹಿಡಿದುಕೊಂಡು ಎರಡನೇ ಸ್ಥಾನ ಪಡೆದಿದ್ದಾರೆ. ಇವರು ಕಾರ್ಕಳ ತಾಲೂಕು ಬೈಲೂರು ದಾಮೋದರ ಆಚಾರ್ಯ- ಪುಷ್ಪವತಿ ದಂಪತಿಯ ಪುತ್ರಿ. ಪ್ರಸ್ತುತ ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ಸೇವಾಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಸ್ಥಳೀಯ ಭಜನಾ ತಂಡಗಳಲ್ಲೂ ಸಕ್ರೀಯವಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ತಂದೆ ತಾಯಿಯೊಂದಿಗೆ ಕುಲುಮೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.













































error: Content is protected !!
Scroll to Top