ಹೊಸದಿಲ್ಲಿ : ದಕ್ಷಿಣ ಮಧ್ಯೆ ರೈಲ್ವೆ 4 ಸಾವಿರಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಜ.29ರೊಳಗೆ ಅರ್ಜಿ ಸಲ್ಲಿಬಹುದು.
ರೈಲ್ವೆ ನೇಮಕಾತಿ ಮಂಡಳಿ (ದಕ್ಷಿಣ ಮಧ್ಯೆ ರೈಲ್ವೆ) ಉದ್ಯೋಗ ಪ್ರಕಟಣೆ ಬಿಡುಗಡೆಗೊಳಿಸಿದೆ. ಈ ಹುದ್ದೆಗಳನ್ನು ಸೇರ ಬಯಸುವವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ
ಖಾಲಿ ಇರುವ ಉದ್ದೆಗಳ ಸಂಖ್ಯೆ – 4103
ಎಸಿ ಮೆಕಾನಿಕ್ -250
ಕಾರ್ಪೆಂಟರ್ – 18
ಡೀಸೆಲ್ ಮೆಕ್ಯಾನಿಕ್ -531
ಇಲೆಕ್ಟ್ರಾನಿಕ್ಸ್ – 1019
ಇಲೆಕ್ಟ್ರಾನಿಕ್ ಮೆಕ್ಯಾನಿಕ್ – 92
ಫಿಟ್ಟರ್ – 1460
ಮಷಿನಿಸ್ಟ್ – 71
ಎಂಎಂಡಬ್ಲ್ಯೂ – 24
ಎಂಎಂಟಿಎಂ – 05
ಪೇಂಟರ್ – 80
ವೆಲ್ಡರ್ – 553
ವಿದ್ಯಾರ್ಹತೆ
ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿಯನ್ನು ಕನಿಷ್ಠ ಶೇ.50 ಅಂಕ ಸಹಿತ ಉತ್ತೀರ್ಣವಾಗಿರಬೇಕು. ಜತೆಗೆ ಐಟಿಐ ಕೋರ್ಸ್‌ನಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಆಯಾ ಟ್ರೇಡ್‌ನಡಿ ಉತ್ತೀರ್ಣ ಆಗಿರಬೇಕು.
ವಯಸ್ಸಿನ ಮಿತಿ
ಕನಿಷ್ಠ 15 ಹಾಗೂ ಗರಿಷ್ಠ 24 ವರ್ಷ ವಯೋಮಿತಿ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜಾತಿವಾರು ವಯಸ್ಸಿನ ಮೀತಿ ಮೀಸಲಾತಿ ನಿಯಮದಡಿ ಅರ್ಹರಿಗೆ ಅನ್ವಯವಾಗಲಿದೆ ಎಂದು ಇಲಾಖೆ ಅಧಿಸೂಚನೆ ತಿಳಿಸಿದೆ.
ಮೆಟ್ರಿಕ್ಯುಲೇಷನ್ ಶೇ.50 ಅಂಕಗಳು, ಐಟಿಐ ಶೇ. 50 ಅಂಕಗಳನ್ನು ಪರಿಗಣಿಸಿ, ಟ್ರೇಡ್‌ವಾರು ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತವುದು. ನಂತರ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು.
ವೆಬ್‌ಸೈಟ್ https://scr.indianrailways.gov.in/





























































