9600ಕ್ಕೂ ಅಧಿಕ ವಿಮಾನಗಳ ಸಂಚಾರ ಅಸ್ತವ್ಯಸ್ತ
ವಾಷಿಂಗ್ಟನ್ : ಶಂಕಿತ ಸೈಬರ್ ದಾಳಿಯಿಂದಾಗಿ ಅಮೆರಿಕದಲ್ಲಿ ಬುಧವಾರ ವಿಮಾನ ಸಂಚಾರ ತೀವ್ರವಾಗಿ ಅಸ್ತವ್ಯಸ್ತಗೊಂಡಿತ್ತು. 9500ಕ್ಕೂ ಅಧಿಕ ವಿಮಾನಗಳ ಸಂಚಾರ ಈ ದಾಳಿಯಿಂದಾಗಿ ಅಸ್ತವ್ಯಸ್ತವಾಗಿತ್ತು. ಆದರೆ ಇದು ಕಂಪ್ಯೂಟರ್ ಸಿಸ್ಟಮ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ಎದುರಾದ ತೊಂದರೆ ಎಂದು ಅಮೆರಿಕ ಹೇಳಿಕೊಂಡಿದೆ.
ಸೈಬರ್ ದಾಳಿಯಾಗಿರುವುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ. ಸೈಬರ್ ತಂತ್ರಜ್ಞರು ಸಮಸ್ಯೆಯ ಮೂಲ ಕಂಡುಕೊಳ್ಳಲು ಪ್ರಯತ್ನಸುತ್ತಿದ್ದಾರೆ. ನಿತ್ಯ ವಿಮಾನ ಪ್ರಯಾಣ ಮಾಡುವವರ ಸುರಕ್ಷೆ ನಮಗೆ ಮುಖ್ಯ, ಯಾವುದೇ ಎಡವಟ್ಟಿಗೆ ಅವಕಾಸ ಕೊಡುವುದಿಲ್ಲ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರಿನ್ ಜೀನ್ ಹೇಳಿದ್ದಾರೆ.
ಸೈಬರ್ ದಾಳಿಯಿಂದಾಗಿ ಬುಧವಾರ 9600 ವಿಮಾನಗಳ ಸಂಚಾರ ಬಾಧಿತವಾಗಿದೆ. 1,300 ವಿಮಾನಗಳ ಪ್ರಯಾಣ ಪೂರ್ಣವಾಗಿ ರದ್ದುಗೊಳಿಸಲಾಗಿತ್ತು. ಇದು ಅಮೆರಿಕದ ವಾಯಯಾನ ವ್ಯವಸ್ಥೆಯ ಮೇಲಾಗಿರುವ ಅತಿದೊಡ್ಡ ಸೈಬರ್ ದಾಳಿ ಎನ್ನಲಾಗಿದೆ. ಅಧ್ಯಕ್ಷ ಜೋ ಬೈಡೆನ್ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಅಮೆರಿಕದ ವಾಯುಯಾನ ವ್ಯವಸ್ಥೆ ಇಷ್ಟು ದೊಡ್ಡದಲ್ಲಿ ರದ್ದು, ಅಸ್ತವ್ಯಸ್ತವಾದ ಸಮಸ್ಯೆ ಎದುರಿಸಿರುವುದು ಸುಮಾರು ಎರಡು ದಶಕಗಳ ಬಳಿಕ ಇದೇ ಮೊದಲು.
ಅಮೆರಿಕದವರು ಹತ್ತಿರದ ನಗರಗಳಿಗೆ ಕೂಡ ವಿಮಾನ ಪ್ರಯಾಣವನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಕಾರಣ ವಿಮಾನಗಳು ರದ್ದಾಗಿರುವುದರಿಂದ ಅಲ್ಲಿನ ಜನರು ತೀವ್ರ ಸಮಸ್ಯೆ ಎದುರಿಸಿದ್ದಾರೆ. ಅನೇಕ ಕಾರ್ಪೋರೇಟ್ ಮೀಟಿಂಗುಗಳು, ಸಭೆ ಸಮಾರಂಭಗಳು ರದ್ದಾಗಿವೆ.
























