ಕ್ರಿಯೇಟಿವ್‌ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ

ಕಾರ್ಕಳ : ವಿವೇಕಾನಂದರ ಚೈತನ್ಯ ಶಕ್ತಿ ಯುವ ಮನಸ್ಸುಗಳಲ್ಲಿ ಮೊಳೆಯಲಿ. ತನ್ಮೂಲಕ ದೇಶದ ಭವಿತವ್ಯವನ್ನು, ಸುಭದ್ರ ಭಾರತದ ನಿರ್ಮಾಣ ಮಾಡಲು ಯುವ ಸಮುದಾಯ ಕಾರ್ಯಪ್ರವೃತ್ತವಾಗಲಿ ಎಂದು ಹಿಂದಿ ಉಪನ್ಯಾಸಕ ವಿನಾಯಕ ಜೋಗ್‌ ಕರೆ ನೀಡಿದರು. ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾಲೇಜಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.


ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸೋಣ. ಇಂದಿನ ಕಾಲದಲ್ಲಿ ಯುವಕರೆಲ್ಲರೂ ಒಂದಾಗಿ ಜಗತ್ತಿನ ಪ್ರಮುಖ ಶಕ್ತಿಯಾಗಿ ಮುನ್ನುಗ್ಗಲಿ ಎಂದು ಕಾಲೇಜಿನ ಸಂಸ್ಥಾಪಕರಾದ ಗಣಪತಿ ಭಟ್‌ ಕೆ.ಎಸ್. ಶುಭ ಹಾರೈಸಿದರು. ವಿದ್ಯಾರ್ಥಿನಿ ವಿಂಧ್ಯಾ ಹೆಗಡೆ ವಿವೇಕಾನಂದರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಉಮೇಶ್‌, ರಾಮಕೃಷ್ಣ ಹೆಗಡೆ, ರಾಘವೇಂದ್ರ ರಾವ್‌, ಗಿರೀಶ್‌ ಭಟ್‌, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರಕಾಶ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ಅನಘಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

















































error: Content is protected !!
Scroll to Top