ಕಾರ್ಕಳ : ಮಿಯ್ಯಾರು ಕಂಬಳ ಸಮಿತಿ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಸಹಯೋಗದೊಂದಿಗೆ 19ನೇ ವರ್ಷದ ಮಿಯ್ಯಾರು ಲವ-ಕುಶ ಜೋಡುಕರೆ ಬಯಲು ಕಂಬಳ ಮಂಗಳವಾರ ಮುಂಜಾನೆ 2:30 ವೇಳೆಗೆ ಸಮಾಪ್ತಿಗೊಂಡಿತು. ಕಂಬಳ ಕೂಟದಲ್ಲಿ ಒಟ್ಟು 264 ಜತೆ ಕೋಣಗಳು ಭಾಗವಹಿಸುವ ಮೂಲಕ ಮಿಯ್ಯಾರು ಕಂಬಳ ಹೊಸ ದಾಖಲೆಗೆ ಸಾಕ್ಷಿಯಾಯಿತು.
ಫಲಿತಾಂಶ
ಕನಹಲಗೆ
ಪ್ರಥಮ : ಕಾಂತಾವರ ಬೇಲಾಡಿಬಾವ ಅಶೋಕ್ ಶೆಟ್ಟಿ (ಓಡಿಸಿದವರು : ತೆಕ್ಕಟ್ಟೆ ಸುಧೀರ್ ದೇವಾಡಿಗ)
ದ್ವಿತೀಯ : ಬಾರ್ಕೂರು ಶಾಂತರಾಮ ಶೆಟ್ಟಿ (ಬೈಂದೂರು ಭರತ್)
ಹಗ್ಗ ಹಿರಿಯ
ಪ್ರಥಮ : ನಂದಳಿಕೆ ಶ್ರೀಕಾಂತ್ ಭಟ್ ಎ (ಪಟ್ಟೆ ಗುರುಚರಣ್)
ದ್ವಿತೀಯ : ಕಾರ್ಕಳ ಜೀವನ್‌ದಾಸ್ ಅಡ್ಯಂತಾಯ ಎ (ಮಿಜಾರು ಅಶ್ವಥಪುರ ಶ್ರೀನಿವಾಸ್ ಗೌಡ)

ಹಗ್ಗ ಕಿರಿಯ
ಪ್ರಥಮ : ಮಿಯ್ಯಾರು ಹಿಣಪಾಡಿ ಜಿನರಾಜ್ ಪಡಿವಾಳ್ ಬಿ. (ಭಟ್ಕಳ ಶಂಕರ)
ದ್ವಿತೀಯ : ನಕ್ರೆ ಮಹೋದರ ನಿವಾಸ ಇಶಾನಿ ನಾರಾಯಣ ಭಂಡಾರಿ (ಪಣಪೀಲು ಪ್ರವೀಣ್ ಕೋಟ್ಯಾನ್)
ಅಡ್ಡ ಹಲಗೆ
ಪ್ರಥಮ : ನಾರಾವಿ ಯುವರಾಜ್ ಜೈನ್ (ಭಟ್ಕಳ್ ಹರೀಶ್)
ದ್ವಿತೀಯ : ಹಂಕರ್‌ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ (ತೆಕ್ಕಟ್ಟೆ ಸುಧೀರ್ ದೇವಾಡಿಗ)
ನೇಗಿಲು ಹಿರಿಯ
ಪ್ರಥಮ : ಮುಡಾರು ರಾಮೇರಗುತ್ತು ಹಾರ್ದಿಕ್ ಹರ್ಷವರ್ಧನ್ ಪಡಿವಾಳ್ ಎ (ಬೈಂದೂರು ವಿವೇಕ್)
ದ್ವಿತೀಯ : ನಲ್ಲೂರು ಮೇಗಿನಮನೆ ಆಶಿಕ್ ದಿವಾಕರ ಶೆಟ್ಟಿ ಬಿ. (ನಕ್ರೆ ಪವನ್ ಮಡಿವಾಳ್)
ನೇಗಿಲು ಕಿರಿಯ
ಪ್ರಥಮ : ಮುನಿಯಾಲು ಉದಯ ಕುಮಾರ್ ಶೆಟ್ಟಿ (ಪಟ್ಟೆ ಗುರುಚರಣ್)
ದ್ವಿತೀಯ : ಪಣೋಲಿಬೈಲು ಭಂಡಾರದ ಮನೆ ಶಿವಾನಂದ ಕುಲಾಲ್ (ಪಣಪೀಲು ಪ್ರವೀಣ್ ಕೋಟ್ಯಾನ್)




















