ಮೇಲ್ಮನವಿ ಸಲ್ಲಿಸುತ್ತೇನೆ – ಯೋಗೀಶ್‌ ಆಚಾರ್ಯ ಪ್ರತಿಕ್ರಿಯೆ

ಕಾರ್ಕಳ : ಲಾಕ್ ಡೌನ್ ಸಂದರ್ಭ ಕಾರ್ಕಳದಲ್ಲಿ ಮಾತ್ರವೇ ಗೇರು ಕಾರ್ಖಾನೆ ಕಾರ್ಯಾಚರಿಸುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ಬಂದ ವರದಿಯಂತೆ ಸಾಮಾನ್ಯ ಜನರಿಗಿಲ್ಲದ ಅವಕಾಶ ಗೇರು ಕಾರ್ಖಾನೆಗೆ ಯಾಕೆಂದು ಪ್ರಶ್ನೆ ಮಾಡಿರುವುದಕ್ಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ಕಾರ್ಕಳದಲ್ಲಿ ನಿರಂತರ ಹೋರಾಟ ನೀಡುತ್ತಿರುವ ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ. ಈ ಮೂಲಕ ನನ್ನಂತ ಒಂದು ಸಣ್ಣ ಸಮುದಾಯದಿಂದ ಬಂದಿರುವವನ ಮೇಲೆ ಕಿರುಕುಳ ನೀಡುವ ಕಾರ್ಯ ಮಾಡಲಾಗುತ್ತಿದೆ. ಭ್ರಷ್ಟಾಚಾರದ ವಿರುದ್ದ ನಿರಂತರವಾಗಿ ನಾನು ಹೋರಾಟ ಮಾಡಿಕೊಂಡು ಬಂದಿದ್ದು ಯಾರ ವಿರುದ್ದವೂ ಮಾನಹಾನಿ ಮಾಡುವಂತಹ ಕೃತ್ಯಗಳನ್ನು ಎಸಗಿಲ್ಲ. ಭ್ರಷ್ಟಾಚಾರದ ವಿರುದ್ದದ ಹೋರಾಟವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳಿಸುತ್ತೇನೆ. ನನ್ನ ವಿರುದ್ಧ ಬಂದಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ಕಾರ್ಕಳ ಯುವ ಕಾಂಗ್ರೆಸ್‌ ಅಧ್ಯಕ್ಷ ಯೋಗೀಶ್ ಆಚಾರ್ಯ ಇನ್ನಾ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಯೋಗೀಶ್‌ ಆಚಾರ್ಯ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ್ದಾರೆಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್‌ ಅವರು ಕೋರ್ಟ್‌ ಮೊರೆ ಹೋಗಿದ್ದು, ಬೆಂಗಳೂರಿನ ೧೨ ನೇ ಸಿಟಿ ಸಿವಿಲ್ ನ್ಯಾಯಾಲಯ ಯೋಗೀಶ್‌ ಹಾಗೂ ಕಾರ್ಕಳದ ರಾಧಾಕೃಷ್ಣ ನಾಯಕ್ ಎಂಬವರಿಗೆ ದಂಡ ವಿಧಿಸಿ, ಕ್ಷಮೆ ಯಾಚಿಸುವಂತೆ ತೀರ್ಪು ನೀಡಿತ್ತು.‌ ತೀರ್ಪು ಪ್ರಕಟಗೊಂಡ ಹಿನ್ನೆಲೆಯಲ್ಲಿ ಯೋಗೀಶ್‌ ಆಚಾರ್ಯ ಅವರು ಪ್ರತಿಕ್ರಿಯಿಸಿದ್ದಾರೆ.











































error: Content is protected !!
Scroll to Top