ಕಾಂಗ್ರೆಸ್‌ ವಿರುದ್ಧ ಬಿಜೆಪಿ ʼಥಟ್‌ ಅಂತ ಹೇಳಿʼ ಪೋಸ್ಟರ್‌ ಅಭಿಯಾನ

ಸೋನಿಯಾ, ರಾಹುಲ್‌ ಎದುರು ಸಿದ್ದರಾಮಯ್ಯ ಇಲಿ ಎಂದು ಲೇವಡಿ

ಬೆಂಗಳೂರು: ಕಾಂಗ್ರೆಸ್ ಮಾಡಿದ ಪೇಸಿಎಂ ಪೋಸ್ಟರ್‌ ಮಾದರಿಯಲ್ಲಿ ಬಿಜೆಪಿ ಈಗ ತಿರುಗೇಟು ಕೊಡಲು ಆರಂಭಿಸಿದೆ. ವಕ್ಫ್ ಮಂಡಳಿಗೆ ಸೇರಿದ 2.30 ಲಕ್ಷ ಕೋಟಿ ರೂ. ಮೌಲ್ಯದ 29 ಸಾವಿರ ಎಕರೆ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿತ್ತು. ಈ ಪ್ರಕರಣದ ಭೂಗಳ್ಳ ಯಾರು? ಎಂದು ಟ್ವಿಟ್ಟರ್‌ನಲ್ಲಿ ಬಿಜೆಪಿ ಪೋಸ್ಟರ್‌ ಹಾಕಿ ಪ್ರಶ್ನಿಸಿದೆ.
ಪದವಿ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಲ್ಯಾಪ್‌ಟಾಪ್‌ ವಿತರಣೆಯಲ್ಲೂ ಗೋಲ್‌ ಮಾಡಿ ಬರೋಬ್ಬರಿ 300 ಕೋಟಿ ರೂ. ಲಪಟಾಯಿಸಿದವರು ಯಾರು ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕಾಮನ್‌ ಮ್ಯಾನ್‌ ಸಿಎಂ ಅವರನ್ನು ನಾಯಿಗೆ ಹೋಲಿಸುವ ಸಿದ್ದರಾಮಯ್ಯ ಅವರು ಸೋನಿಯಾ, ರಾಹುಲ್‌ ಎದುರು ಬಂದರೆ ಇಲಿಯಂತಾಗುತ್ತಾರೆ, ಬೊಮ್ಮಾಯಿ ಅವರನ್ನು ಬಾಯಿಗೆ ಬಂದಂತೆ ಆಡಿಕೊಂಡವರದ್ದು ಈಗ ನಾಯಿಪಾಡು ಎಂದು ಬಿಜೆಪಿ ಲೇವಡಿ ಮಾಡಿದೆ.ಬಿಜೆಪಿ ಮಾಡಿದ ಥಟ್‌ ಅಂತ ಹೇಳಿ…ಪೋಸ್ಟರ್‌ ಭಾರಿ ವೈರಲ್‌ ಆಗಿದೆ.











































error: Content is protected !!
Scroll to Top