ಕಾರ್ಕಳ : ಟಯರ್ ಬ್ಲಾಸ್ಟ್ ಆಗಿ ಪಿಕಪ್ ವಾಹನವೊಂದು ಪಲ್ಟಿಯಾದ ಘಟನೆ ಕುಕ್ಕುಂದೂರು ಶಾಲೆಯ ಸಮೀಪ ಜ. 5 ರ ಮಧ್ಯಾಹ್ನ 12 ಗಂಟೆಗೆ ಸಂಭವಿಸಿದೆ. ಅರಳು ತುಂಬಿದ್ದ ಪಿಕಪ್ ಸಾಗುತ್ತಿದ್ದಾಗ ದಾರಿ ಮಧ್ಯದಲ್ಲಿ ಟಯರ್ ಸ್ಪೋಟಗೊಂಡಿದ್ದು, ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದಿದೆ. ಪರಿಣಾಮವಾಗಿ ವಾಹನದಲ್ಲಿದ್ದ ಅರಳಿನ ಚೀಲಗಳು ರಸ್ತೆಗೆ ಬಿದ್ದು ಚೆಲ್ಲಾಪಿಲ್ಲಿಯಾಗಿದೆ. ಯಾವುದೇ ರೀತಿಯಾದ ಪ್ರಾಣಾಪಾಯ ಉಂಟಾಗಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟು ತಿಳಿದು ಬರಬೇಕಾಗಿದೆ.
ಟಯರ್ ಬ್ಲಾಸ್ಟ್ ಆಗಿ ಪಿಕಪ್ ಪಲ್ಟಿ





























































