ದಿವಾಳಿಯಾಗಿರುವ ದೇಶದಲ್ಲಿ ಜನರ ಅಗತ್ಯ ಸೌಲಭ್ಯಗಳಿಗೂ ಕತ್ತರಿ
ಇಸ್ಲಾಮಾಬಾದ್ : ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ಥಾನ ವಿದ್ಯುತ್ ಉಳಿಸುವ ಸಲುವಾಗಿ ಸಿನೇಮಾ ಥಿಯೇಟರ್, ಮಾಲ್, ಮದುವೆ ಹಾಲ್, ಮಾರ್ಕೆಟ್‌ಗಳನ್ನು ಮುಚ್ಚಲು ಆದೇಶ ಹೊರಡಿಸಿದೆ. ಇಂಧನ ಉಳಿತಾಯ ಯೋಜನೆಯಂಗವಾಗಿ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ಹೊತ್ತು ಬೇಗ ದೀಪ ಅರಿಸಬೇಕೆಂದು ಆದೇಶದಲ್ಲಿ ಹೇಳಲಾಗಿದೆ.
ಹೊಸ ಆದೇಶದ ಪ್ರಕಾರ ಮಾಲ್ ಮತ್ತು ಮಾರ್ಕೆಟ್‌ಗಳು ರಾತ್ರಿ 8.30ರೊಳಗೆ ಮುಚ್ಚಬೇಕು. ಮದುವೆ ಹಾಲ್‌ಗಳು ರಾತ್ರಿ 10 ರೊಳಗೆ ಮುಚ್ಚಬೇಕು. ಇದರ ಜತೆಗೆ ಹೆಚ್ಚು ವಿದ್ಯುತ್ ಬಳಸುವ ಬಲ್ಬ್, ಫ್ಯಾನ್ ಮತ್ತಿತರ ಇಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಯನ್ನೂ ಸರಕಾರ ನಿಷೇಧಿಸಿದೆ. ಕಡಿಮೆ ಗ್ಯಾಸ್ ಬಳಸುವ ಗೀಸರ್‌ಗಳ ಬಳಕೆಯನ್ನು ಒಂದು ವರ್ಷದೊಳಗೆ ಕಡ್ಡಾಯಗೊಳಿಸಲು ಸರಕಾರ ತೀರ್ಮಾನಿಸಿದೆ. ಈ ಮೂಲಕ ಗ್ಯಾಸ್ ಕೂಡ ಉಳಿತಾಯ ಮಾಡುವ ಯೋಜನೆ ಹಾಕಿಕೊಂಡಿದೆ.






















