ಕಾರ್ಕಳ : 169ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ : ಬೃಹತ್‌ ವಾಹನ ಜಾಥಾ

ಕಾರ್ಕಳ : ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ತಾಲೂಕಿನ ಎಲ್ಲಾ ಬಿಲ್ಲವ ಸಂಘದ ಮತ್ತು ಸಂಘಟನೆಗಳ ವತಿಯಿಂದ 169ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಪ್ರಯುಕ್ತ ಬೃಹತ್‌ ವಾಹನ ಜಾಥಾವು ಕಾರ್ಕಳ ನಗರ ವ್ಯಾಪ್ತಿಯಲ್ಲಿ ಸೆ. 10ರಂದು ಜರುಗಿತು. ಶನಿವಾರ ಬೃಹತ್‌ ವಾಹನ ಜಾಥವು ಸಂಜೆ 4.30ಕ್ಕೆ ಬಿಲ್ಲವ ಸಂಘದಿಂದ ಹೊರಟು ಬಂಡೀಮಠ ಮಾರ್ಗವಾಗಿ ಸಾಲ್ಮರ, ವೆಂಕಟರಮಣ ದೇವಸ್ಥಾನ, ಬಸ್‌ಸ್ಟಾಂಡ್, ಅನಂತಶಯನ ಮಾರ್ಗವಾಗಿ ಬಾಹುಬಲಿ ಬೆಟ್ಟ, ಆನೆಕೆರೆ ಶ್ರೀಕೃಷ್ಣ ಕ್ಷೇತ್ರದಲ್ಲಿ ಸಂಪನ್ನಗೊಂಡಿತು. ವಾಹನ ಜಾಥಾದಲ್ಲಿ ಹೆಚ್ಚಿನ ಸಂಖ್ಯೆಯ ಸಮಾಜ ಭಾಂದವರು ಭಾಗವಹಿಸಿದ್ದರು. ಬಳಿಕ ಶ್ರೀಕೃಷ್ಣ ಕ್ಷೇತ್ರದಲ್ಲಿ ನಾರಾಯಣಗುರು ಪೂಜೆ ಜರುಗಿತು. ಜಾಥಾದಲ್ಲಿ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ. ಆರ್‌. ರಾಜು, ಶ್ರೀ ಕೃಷ್ಣ ಕ್ಷೇತ್ರದ ಆಡಳಿತ ಮೊಕ್ತೇಸರ ಭಾಸ್ಕರ್‌ ಕೋಟ್ಯಾನ್‌, ಯುವವಾಹಿನಿ ಅಧ್ಯಕ್ಷ ತಾರಾನಾಥ್ ಕೋಟ್ಯಾನ್ ,ಯೂತ್ ಬಿಲ್ಲವ ಅಧ್ಯಕ್ಷರ ಭರತ್ ಅಂಚನ್, ಶ್ರೀ ನಾರಾಯಣ ಗುರು ವೇದಿಕೆ ಅಧ್ಯಕ್ಷ ಗಂಗಾಧರ ಪಣಿಯೂರು,ಪ್ರಭಾಕರ್‌ ಬಂಗೇರ, ಕರುಣಾಕರ್‌ ಕೋಟ್ಯಾನ್‌, ಅರುಣ್ ಪೂಜಾರಿ ಮಾಂಜ, ಚಂದ್ರಹಾಸ ಸುವರ್ಣ, ಅಶೋಕ್‌ ಸುವರ್ಣ, ಗಣೇಶ್‌ ಸಾಲ್ಯಾನ್‌, ವಸಂತ್ ಎಮ್,ಸಂದೇಶ್‌ ಕೋಟ್ಯಾನ್‌, ರಾಕೇಶ್‌ ಅಮೀನ್‌, ರಾಜೇಂದ್ರ ಅಮೀನ್‌, ಶ್ರೀನಿವಾಸ್‌ ಬೈಲೂರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









































































































error: Content is protected !!
Scroll to Top