ಕಾಪು: ಉದ್ಯಾವರ ಸಂಪಿಗೆ ನಗರದ ಯುವತಿಯೊಬ್ಬಳು ರಾತೋರಾತ್ರಿ ನಾಪತ್ತೆಯಾದ ಘಟನೆ ವರದಿಯಾಗಿದೆ. ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 20ರ ಹರೆಯದ ನೇತ್ರಾವತಿ ಎಂಬ ಯುವತಿ ನಾಪತ್ತೆಯಾಗಿರುವ ಕುರಿತು ಆಕೆಯ ಅಕ್ಕ ದೂರು ದಾಖಲಿಸಿದ್ದಾರೆ.
ಉದ್ಯಾವರದ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಆ.22ರಂದು ರಾತ್ರಿ ಊಟ ಮಾಡಿ ಮಲಗಿದ್ದಳು. ಮರುದಿನ ಬೆಳಗೆದ್ದು ನೋಡುವಾಗ ಆಕೆ ಮನೆಯಲ್ಲಿ ಇರಲಿಲ್ಲ. ಬೆಳಗೆಗ 5.30ಕ್ಕೆ ಎದ್ದು ಬಚ್ಚಲಿಗೆ ಹೋದದ್ದು ಮನೆಯವರಿಗೆ ಗೊತ್ತಿದೆ. ಆಕೆ ಅಲ್ಲಿಂದಲೇ ಪರಾರಿಯಾಗಿರದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತೋರಾತ್ರಿ ಯುವತಿ ನಾಪತ್ತೆ






















