ಅಹ್ಮದ್‌ನಗರ: ಗುಜರಾತಿನ ಭಾವನಗರ ಜಿಲ್ಲೆಯ ಬೊಟಾಡ್‌ನಲ್ಲಿ ಕಳ್ಳಬಟ್ಟಿ ಕುಡಿದು ಸಾವನ್ನಪ್ಪಿದವರ ಸಂಖ್ಯೆ 19ಕ್ಕೇರಿದೆ. ಮಂಗಳವಾರಕ್ಕಾಗುವಾಗ ಚಿಕಿತ್ಸೆ ಫಲಿಸದೆ ಮತ್ತೆ 9 ಮಂದಿ ಸಾವನ್ನಪ್ಪಿ ಬಲಿಯಾದವರ ಸಂಖ್ಯೆ 19ಕ್ಕೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ. 40ಕ್ಕೂ ಹೆಚ್ಚು ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಸಾರಾಯಿ ಎಂದು ಹೇಳಿ ಅಪಾಯಕಾರಿ ರಾಸಾಯನಿಕ ದ್ರಾವಣವನ್ನು ಮಾರಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ಇಮೋಸ್ ಎಂಬ ಕಂಪನಿ ಪೂರೈಸಿದ ಮಿಥಾಯಿಲ್ ರಾಸಾಯನಿಕವನ್ನು ಸಾರಾಯಿ ಹೆಸರಿನಲ್ಲಿ ಮಾರಾಟ ಮಾಡಲಾಗಿದೆ ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದೆ. ಗೋದಾಮು ಮೆನೇಜರ್ ಜಯೇಶ್ ಅಲಿಯಾಸ್ ರಾಜು ಎಂಬಾತ ಕದ್ದು 200 ಲೀಟರ್ ಮಿಥಾಯಿಲ್ ಅನ್ನು ತನ್ನ ಸಂಬಂಧಿಕ ಸಂಜಯ್ ಎಂಬಾತನಿಗೆ 60,000 ರೂ.ಗೆ ಮಾರಾಟ ಮಾಡಿದ್ದ.
ಸಂಜಯ್ ತನ್ನ ಸಹಚರ ಪಿಂಟು ಎಂಬವನ ಜತೆ ಸೇರಿ ಇದನ್ನು ಪೊಟ್ಟಣಗಳಿಗೆ ತುಂಬಿಸಿ ಸಾರಾಯಿ ಎಂದು ಮಾರಾಟ ಮಾಡಿದ್ದ.ಈ ಪ್ರಕರಣದಲ್ಲಿ ಒಟ್ಟು 10 ಮಂದಿ ಭಾಗಿಯಾಗಿರುವ ಶಂಕೆಯಿದೆ. ಅವರಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
