ಅಧ್ಯಯನಕ್ಕೆ ಹೊಸ ಸಮಿತಿ ರಚನೆ -ಘಟ್ಟ ತಪ್ಪಲಿನ ಜನ ಸದ್ಯ ನಿರಾಳ
ಬೆಂಗಳೂರು: ಪಶ್ಚಿಮಘಟ್ಟ ಸಂರಕ್ಷಿಸುವ ನಿಟ್ಟನಲ್ಲಿ ಕಸ್ತೂರಿರಂಗನ್ ಸಮಿತಿ ಸಲ್ಲಿಸಿದ್ದ ವರದಿಯನ್ನು ಸದ್ಯಕ್ಕೆ ಜಾರಿ ಮಾಡದಿರಲು ಕೇಂದ್ರ ಸರಕಾರ ತೀರ್ಮಾನಿಸಿರುವುದರಿಂದ ಘಟ್ಟದ ತಪ್ಪಲಿನ ಜನರ ಕಂಟಕ ತಪ್ಪಿದೆ.
ವರದಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರಾಕರ ಒಂದು ವರ್ಷದ ಮಟ್ಟಿಗೆ ವರದಿ ಜಾರಿಯಾಗುವುದನ್ನು ತಡೆಹಿಡಿದು ವಸ್ತುಸ್ಥಿತಿ ಅಧ್ಯಯನ ಮಾಡಲು ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ನಿರ್ಧರಿಸಿದೆ.
ಪಶ್ಚಿಮಘಟ್ಟ ವ್ಯಾಪ್ರಿಯ ಪ್ರತಿ ಹಳ್ಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಅಧ್ಯಯನ ಮಾಡಲು ಈ ಸಮಿತಿಗೆ ಒಂದು ವರ್ಷದ ಕಾಲಾವಕಾಶ ನೀಡಲಾಗಿದೆ.
ವರದಿ ಜಾರಿ ವಿರೋಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಲೆನಾಡು ಮತ್ತು ಕರಾವಳಿಯ ಶಾಸಕರು ಮತ್ತು ಸಂಸದರ ನಿಯೋಗ ಸೋಮವಾರ ಕೇಂಧ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.
ಕಸ್ತೂರಿರಂಗನ್ ವರದಿ ಜಾರಿಗೆ ತಡೆ
Recent Comments
ಕಗ್ಗದ ಸಂದೇಶ
on