ಹೊಸದಿಲ್ಲಿ: ನ್ಯಾಶನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಜಾರಿ ನಿರ್ದೇಶನಾಲಯ ಇಂದು ಮತ್ತೊಂದು ಸುತ್ತಿನ ವಿಚಾರನೇಗೊಳಪಡಿಸಲಿದೆ. ಜು.22ರಂದು ಸೋನಿಯಾ ಗಾಂಧಿ ಮೊದಲ ಸುತ್ತಿನ ವಿಚಾರಣೆ ಎದುರಿಸಿದ್ದರು. ಅಂದು ಬರೀ ಎರಡು ತಾಸು ಮಾತ್ರ ವಿಚಾರಣೆ ಎದುರಿಸಿದ ಸೋನಿಯಾ ಸುಸ್ತಾಗುತ್ತಿದೆ ಎಂದು ಹೇಳಿ ವಾಪಸಾಗಿದ್ದರು. ಈ ಹಿನ್ನೆಲೆಯಲ್ಲಿ ಇ.ಡಿ. ಇಂದು ಅವರನ್ನು ಮತ್ತೆ ವಿಚಾರಣೆಗೆ ಕರೆದಿದೆ. ಬೆಳಗ್ಗೆ 11 ಗಂಟೆಗೆ ಸೋನಿಯಾ ವಿಚಾರಣೆಗೆ ಹಾಜರಾಗಲಿದ್ದಾರೆ.
ಕಾಂಗ್ರೆಸ್ ಮೌನ ಪ್ರತಿಭಟನೆ
ಜು.22ರಂದು ಸೋನಿಯಾ ವಿಚಾರಣೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಇಂದು ಮೌನ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ ಇಂದು ಕಾಂಗ್ರೆಸ್‌ನ ಮೌನ ಪ್ರತಿಭಟನೆ ನಡೆಯಲಿದೆ.
ಕಳ್ಳನಾಯಕಿಗೆ ಮೌನ ಬೆಂಬಲ-ಕಾಂಗ್ರೆಸ್ ಕಾಲೆಳೆದ ಬಿಜೆಪಿ
ಈ ನಡುವೆ ಕಾಂಗ್ರೆಸ್‌ನ ಮೌನ ಪ್ರತಿಭಟನೆಯನ್ನು ಬಿಜೆಪಿ ಕಳ್ಳನಾಯಕಿಯ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಮೌನ ಬೆಂಬಲ ನೀಡುತ್ತಿದೆ ಎಂದು ಕಾಲೆಳೆದಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ಸಿಗರು ದಿವ್ಯ ಮೌನಕ್ಕೆ ಶರಣಾಗುತ್ತಿರುವುದು ಹೊಸತೇನಲ್ಲ ಎಂದು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಈ ಹಿಂದೆ ಹಿಂದೂಗಳ ಮೇಲೆ, ದಲಿತರ ಮೇಲೆ, ಮಹಿಳೆಯರ ಮೇಲೆ, ರೈತರ ಮೇಲೆ, ಸೈನಿಕರ ಮೇಲೆ, ಬಡವರ ಮೇಲೆ ದೌರ್ಜನ್ಯವಾದಾಗ ಕಾಂಗ್ರೆಸ್ ಬಾಯಿ ಬಿಟ್ಟಿತ್ತೇ..? ದಲಿತ ನಾಯಕ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ಮತಾಂಧರು ದಾಳಿ ನಡೆಸಿದಾಗ, ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಮೌನವಾಗಿತ್ತು. ದಲಿತ ನಾಯಕನ ವಿಚಾರದಲ್ಲೂ ಕಾಂಗ್ರೆಸ್ ಮೌನವಾಗಿದ್ದೇಕೆ..? ಎಂದು ಪ್ರಶ್ನಿಸಿದೆ.
ವ್ಯಾಪಾರಿಯೊಬ್ಬನ ಕಲ್ಲಂಗಡಿ ಹಣ್ಣು ಕೊಚ್ಚಿ ಹಾಕಿದಾಗ ಆರ್ಭಟಿಸಿ ಬೊಬ್ಬಿರಿದ ಕಾಂಗ್ರೆಸ್ ನಾಯಕರು, ರಾಜಸ್ಥಾನದ ಕನ್ನಯ್ಯ ಲಾಲ್ ಅವರನ್ನು ಕೊಚ್ಚಿಹಾಕಿದ್ದಾಗ, ಚಾಮರಾಜಪೇಟೆಯ ಚಂದುವನ್ನು ಹತ್ಯೆಗೈದಾಗ ಮೌನ ಪ್ರತಿಭಟನೆ ಮಾಡಿತ್ತೇ? ಹಿಂದೂ ದ್ವೇಷಿ ಕಾಂಗ್ರೆಸ್ಸಿಗರು, ಅವರಿಗೆ ಬೇಕಾದಾಗ ಮಾತ್ರ ಮೌನ ಸತ್ಯಾಗ್ರಹ ಮಾಡುತ್ತಾರೆ. ನೀರು ಕೇಳಿದ ರೈತರ ಮೇಲೆ ಅಂದು ಕಾಂಗ್ರೆಸ್ ಸರ್ಕಾರ ಲಾಠಿ ಚಾರ್ಜ್ ಮಾಡಿತ್ತು. ಪೊಲೀಸರ ನಡೆಯ ಬಗ್ಗೆ ಮೀರ್‌ಸಾದಿಕರು ಅಸೆಂಬ್ಲಿಯಲ್ಲಿ ಮೊಸಳೆ ಕಣ್ಣೀರು ಹಾಕಿದ್ದರು. ಒಂದು ಕಡೆ ಚಿವುಟಿ, ಮತ್ತೊಂದೆಡೆ ತೊಟ್ಟಿಲು ತೂಗುವುದು, ಒಂದು ಕಡೆ ಆರ್ಭಟಿಸಿ, ಮತ್ತೊಂದೆಡೆ ಮೌನಕ್ಕೆ ಜಾರುವುದು ಕಾಂಗ್ರೆಸ್‌ಗೆ ಹೊಸತೇನಲ್ಲ ಎಂದು ಲೇವಡಿ ಮಾಡಿದೆ.
ಇಂದು ಸೋನಿಯಾ ಇನ್ನೊಂದು ಸುತ್ತಿನ ವಿಚಾರಣೆ
Recent Comments
ಕಗ್ಗದ ಸಂದೇಶ
on