ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ : ಜು.25 ರಂದು ಪ್ರಮಾಣ ವಚನ ಸ್ವೀಕಾರ

ನವದೆಹಲಿ : ದೇಶದ ರಾಷ್ಟ್ರಪತಿ ಆಯ್ಕೆಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಎನ್‌ಡಿಎ ಅಭ್ಯರ್ಥಿ ಜಾರ್ಖಂಡ್‌ನ ಮಾಜಿ ಗವರ್ನರ್‌ ಆಗಿದ್ದ ದ್ರೌಪದಿ ಮುರ್ಮು ಗೆಲುವು ಸಾಧಿಸಿದ್ದಾರೆ. ಹಾಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ ಅವರ ಅವಧಿ ಜು.24 ರಂದು ಮುಕ್ತಾಯವಾಗಲಿದ್ದು, ಭಾರತದ 15ನೇ ರಾಷ್ಟ್ರಪತಿಯಾಗಿ ಮುರ್ಮು ಅವರು ಜು.25 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸುವ ಮೊದಲ ಬುಡಕಟ್ಟು ಜನಾಂಗದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1958ರಲ್ಲಿ ಜನಿಸಿದ ಇವರು ಒಡಿಶಾದ ಮಯೂರ್‌ ಭಂಜ್‌ ಜಿಲ್ಲೆಯ ಉಪರಬೇದಾ ಗ್ರಾಮದಲ್ಲಿ ಸಂತಾಲ್‌ ಬುಡಕಟ್ಟು ಸಮುದಾಯದಲ್ಲಿ ಜನನ. ಬ್ಯಾಂಕ್‌ ಉದ್ಯೋಗಿಯಾಗಿದ್ದ ಶ್ಯಾಮ್‌ ಚರಣ್‌ ಮುರ್ಮು ಎಂಬವರನ್ನು ವಿವಾಹವಾಗಿದ್ದರು. 2014ರಲ್ಲಿ ಪತಿ ಮೃತರಾಗಿದ್ದು, ಇಬ್ಬರು ಪುತ್ರರು ಮರಣಹೊಂದಿದ್ದಾರೆ. ಓರ್ವ ಪುತ್ರಿ ಇತಿಶ್ರೀ ಮುರ್ಮು ಬ್ಯಾಂಕ್‌ ಉದ್ಯೋಗಿಯಾಗಿದ್ದಾರೆ. ರಾಜಕೀಯ ಪ್ರವೇಶಿಸುವ ಮುನ್ನ ಶಿಕ್ಷಕಿಯಾಗಿ, ತದನಂತರ ಶ್ರೀ ಅರಬಂದೋ ಒಂಟೇಗ್ರಲ್‌ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್‌ ಆಗಿ, ಬಳಿಕ ಒಡಿಶಾ ಸರಕಾರದ ನೀರಾವರಿ ಇಲಾಖೆಯಲ್ಲಿ ಜೂನಿಯರ್‌ ಅಸಿಸ್ಟೆಂಟ್‌ ಆಗಿ ಕರ್ತವ್ಯ ಸಲ್ಲಿಸಿದ್ದರು.
ರಾಜಕೀಯ ಪಯಣ
1997ರಲ್ಲಿ ಬಿಜೆಪಿ ಸೇರಿದ ಮುರ್ಮು ರಾಯಿರಂಗಪುರ ನಗರ ಪಂಚಾಯತ್‌ ಕೌನ್ಸಿಲರ್‌ ಆಗಿ ಆಯ್ಕೆ, 2000ರಲ್ಲಿ ನಗರ ಪಂಚಾಯತ್‌ ಅಧ್ಯಕ್ಷೆಯಾಗಿ, ಬಿಜೆಪಿ ಬುಡಕಟ್ಟು ಜನಾಂಗ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ, ಒಡಿಶಾದಲ್ಲಿ ಸಮ್ಮಿಶ್ರ ಸರಕಾರ ರಚನೆಯಾದಾಗ ಮುರ್ಮು ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು.
ಯಾರಿಗೆ ಎಷ್ಟೆಷ್ಟು ಮತ
ಜು.18ಕ್ಕೆ ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆದಿದ್ದು, ಜು.21 ರಂದು ಮತ ಎಣಿಕೆ ನಡೆದಿದ್ದು, ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಮುರ್ಮು ಮುನ್ನಡೆ ಸಾಧಿಸಿದ್ದರು. ಮುರ್ಮು ಅವರಿಗೆ ಮೂರು ಸುತ್ತಿನ ಮತ ಎಣಿಕೆಯಲ್ಲಿ ಮತಗಳ ಮೌಲ್ಯವು 5,77,777 ಆಗಿದ್ದು, ಯಶವಂತ ಸಿನ್ಹಾ ಪಡೆದ ಮತಗಳ ಮೌಲ್ಯ 2,61,062 ಆಗಿದೆ.





























































































error: Content is protected !!
Scroll to Top