ಕಾರ್ಕಳ : ಸೈಂಟ್ ಡೊಮಿನಿಕ್ ಚರ್ಚ್ ಮಿಯಾರ್ ನಲ್ಲಿ ಭಾನುವಾರ ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಯಿತು. ಚರ್ಚಿನ ಧರ್ಮಗುರು ವಂದನೀಯ ಪಾವ್ಲ್ ರೇಗೊರವರು ಬಲಿ ಪೂಜೆಯನ್ನು ನೆರವೇರಿಸಿ ಅಪ್ಪಂದಿರ ದಿನಾಚರಣೆಯ ಶುಭಾಶಯಗಳನ್ನು ಹೇಳಿದರು.
ವೈವಾಹಿಕ ಜೀವನದಲ್ಲಿ 50 ವರ್ಷಕ್ಕಿಂತ ಹೆಚ್ಚಿನ ವರ್ಷಗಳನ್ನು ಪೂರೈಸಿದ ದಂಪತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ನಂತರ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಸಂಪನ್ಮೂಲ ವ್ಯಕ್ತಿ ಮಂಗಳೂರಿನ ರೋಮಾನ್ಸ್ ಪಿಂಟೊ ಅಪ್ಪಂದಿರು ಕುಟುಂಬದಲ್ಲಿ ಯಾವ ರೀತಿ ನಡೆದುಕೊಳ್ಳಬೇಕೆಂದು ತಿಳಿಸಿದರು.
ಮನರಂಜನೆ ಮತ್ತು ವಿವಿಧ ಸ್ಪರ್ಧೆಗಳನ್ನು ನಡೆಸಿ ಭಾಗವಹಿಸಿದವರ ಮನಸ್ಸನ್ನು ಉಲ್ಲಾಸಗೊಳಿಸಿದರು.
ಈ ಕಾರ್ಯಕ್ರಮವನ್ನು ಕಥೊಲಿಕ್ ಸಭಾ ಮತ್ತು ಕುಟುಂಬ ಆಯೋಗ ಆಯೋಜಿಸಿತ್ತು.
ಕುಟುಂಬ ಆಯೋಗದ ಸಂಚಾಲಕಿ ಪ್ರೇಮಲತಾ ಡಿಸೋಜ ಸ್ವಾಗತಿಸಿ, ರಾಯನ್ ಪ್ರವೀಣ್ ಮೆಂಡೋನ್ಸಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ನವೀನ್ ಪಿಂಟೊರವರು ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಕೆಥೊಲಿಕ್ ಸಭಾದ ಕಾರ್ಯದರ್ಶಿ ಸೋನು ವೇಗಸ್ ವಂದಿಸಿದರು.

























