ಬೆಂಗಳೂರು : ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯ ಪಿಎಸ್‌ಐ ಸುದರ್ಶನ್ ಶೆಟ್ಟಿಯವರು (51) ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹನುಮಂತನಗರ ಠಾಣೆ ಪಿಎಸ್‌ಐ ಆಗಿದ್ದ ಸುದರ್ಶನ್ ಅವರನ್ನು ಕೆಲ ತಿಂಗಳ ಹಿಂದೆ ಸೈಬರ್ ಸೈಬರ್ ಕ್ರೈಂ ಠಾಣೆಗೆ ನಿಯೋಜನೆ ಮೇಲೆ ವರ್ಗಾಯಿಸಲಾಗಿತ್ತು.
ಪ್ರಧಾನಿ ಮೋದಿಯವರ ಭದ್ರತೆಗೆ ಸುದರ್ಶನ ಶೆಟ್ಟಿಯವರನ್ನು ನಿಯೋಜಿಸಲಾಗಿತ್ತು. ಆದರೆ ಸುದರ್ಶನ ಶೆಟ್ಟಿಯವರು ಅನಾರೋಗ್ಯದ ಕಾರಣ ಹೇಳಿ ರಜೆ ಹಾಕಿದ್ದರು.
ನಿನ್ನೆ ಮಗ ವಿಶ್ವ ಅಪ್ಪಂದಿರ ದಿನದ ಶುಭಾಶಯ ಹೇಳಿದ್ದರು. ಈ ಸಂದರ್ಭದಲ್ಲಿ ಮಗನ ಜೊತೆ ಕೆಲ ಹೊತ್ತು ಮಾತನಾಡುತ್ತಾ ಕಾಲ ಕಳೆದಿದ್ದರು. ನಂತರ ತನ್ನ ಕೋಣೆಗೆ ಹೋಗಿದ್ದರು. ಮಲಗಲು ಹೋಗಿರಬಹುದೆಂದು ಭಾವಿಸಿ ಮಗ ಸುಮ್ಮನಾಗಿದ್ದರು.ಬಹಳ ಹೊತ್ತಾದರೂ ಕೋಣೆಯಿಂದ ಹೊರಗೆ ಬಾರದಿದ್ದಾಗ ಅನುಮಾನ ಬಂದು ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಎಸ್‌ಐ ಸುದರ್ಶನ ಶೆಟ್ಟಿ ಆತ್ಮಹತ್ಯೆ
























