ಇಸ್ಲಾಮಾಬಾದ್: ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷಾರಫ್ ಅವರು ಬಹು ಅಂಗಾಂಗ ವೈಫಲ್ಯದಿಂದ ದುಬಾಯಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಪಾಕ್ ಮಾಧ್ಯಮಗಳೇ ಮುಷಾರಫ್ ತೀರಿಕೊಂಡಿರುವ ಸುದ್ದಿಯನ್ನು ಪ್ರಸಾರ ಮಾಡಿವೆ. ಆದರೆ ಅಧಿಕೃತವಾಗಿ ಈ ಸುದ್ದಿ ದೃಢಪಟ್ಟಿಲ್ಲ. ತೀವ್ರ ಅನಾರೋಗ್ಯಕ್ಕೀಡಾದ ಮುಷಾರಫ್ ಅವರನ್ನು ದುಬಾಯಿಯ ಅಮೆರಿಕನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಸಂಜೆ ತೀರಿಕೊಂಡಿದ್ದಾರೆ.
ದಿಲ್ಲಿಯಲ್ಲಿ ಜನಿಸಿದ್ದ ಮುಷಾರಫ್ ಪಾಕಿಸ್ಥಾನದ ಸೇನಾ ದಂಡನಾಯಕರಾಗಿದ್ದರು. 1999ರಲ್ಲಿ ನಡೆದ ಸೇನಾ ದಂಗೆಯಲ್ಲಿ ಪಾಕಿಸ್ಥಾನದ ಅಧಿಕಾರವಹಿಸಿಕೊಂಡ ಅವರು 2001ರಿಂದ 2008ರ ವರೆಗೆ ಅಧ್ಯಕ್ಷರಾಗಿದ್ದರು. ಅಧಿಕಾರ ಕಳೆದುಕೊಂಡ ಬಳಿಕ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಲಾಗಿತ್ತು. ನಂತರ ಮುಷಾರಫ್ ದೇಶಭ್ರಷ್ಟರಾಗಿದ್ದರು. ದಂಡನಾಯಕರಾಗಿದ್ದ ವೇಳೆ ಸರಕಾರಕ್ಕೆ ತಿಳಿಸದೆ ಕಾರ್ಗಿಲ್ ಆಕ್ರಮಿಸಿದ್ದ ಮುಷಾರಫ್ ನಂತರ ನಡೆದ ಯುದ್ಧದಲ್ಲಿ ಸೋತುಸುಣ್ಣವಾಗಿದ್ದರು.
ಪಾಕ್ ಮಾಜಿ ಅಧ್ಯಕ್ಷ ಮುಷಾರಫ್ ನಿಧನ?





















