ಮಲ್ಪೆ : ಉದ್ಘಾಟನೆಗೊಂಡ ಎರಡೇ ದಿನಕ್ಕೆ ಫ್ಲೋಟಿಂಗ್‌ ಬ್ರಿಡ್ಜ್‌ ನೀರುಪಾಲು

ಮಲ್ಪೆ : ಪ್ರವಾಸಿಗರನ್ನು ಸೆಳೆಯುವ ನೂತನ ಪ್ರಯತ್ನವಾಗಿ ಕರ್ನಾಟಕದ ಮೊದಲ ಫ್ಲೋಟಿಂಗ್‌ ಬ್ರಿಡ್ಜ್‌ ಮಲ್ಪೆಯಲ್ಲಿ ನಿರ್ಮಾಣಗೊಂಡು ಇದರ ಉದ್ಘಾಟನಾ ಕಾರ್ಯಕ್ರಮ ಮೇ. 6ರಂದು ನೆರವೇರಿತ್ತು. ಆದರೆ ಉದ್ಘಾಟನೆಗೊಂಡ ಎರಡೇ ದಿನಕ್ಕೆ ಅಂದರೆ ಮೇ. 9ರಂದು ಫೋಂಟೋನ್ಸ್ ಬ್ಲಾಕ್ ಗಳಿಂದ ನಿರ್ಮಾಣವಾದ ತೇಲುವ ಸೇತುವೆ ಅಲೆಗಳ ಅಬ್ಬರಕ್ಕೆ ಸಮುದ್ರದಲ್ಲಿ ಚೆಲ್ಲಾಪಿಲ್ಲಿಯಾಗಿದೆ.
80 ಲಕ್ಷ ವೆಚ್ಚದಲ್ಲಿ ಮಲ್ಪೆಯಲ್ಲಿ ನಿರ್ಮಾಣವಾದ ಸೇತುವೆಯು 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲ ಹೊಂದಿದೆ. ಒಂದು ಬಾರಿಗೆ ನೂರು ಜನರು ಸಾಗಬಹುದಾದ ಸೇತುವೆ ಇದಾಗಿದ್ದು, ಕೊನೆಯಲ್ಲಿ ಸಮುದ್ರಕ್ಕೆ ಚಾಚಿರುವ 12 ಮೀಟರ್ ಉದ್ದ 7.5 ಮೀಟರ್ ಅಗಲದ ವೇದಿಕೆ ಇದ್ದು, ಒಬ್ಬರು ನೂರು ರೂಪಾಯಿ ಪಾವತಿಸಿ, 15 ನಿಮಿಷ ಕಾಲ ಸೇತುವೆ ಮೇಲೆ ಕಳೆಯಲು ಅವಕಾಶ ಕಲ್ಪಿಸಲಾಗಿತ್ತು.

ತೇಲುವ ಸೇತುವೆ ಸ್ಥಗಿತ
ತಾಂತ್ರಿಕ ದೋಷ ಮತ್ತು ಅಲೆಗಳ ಅಬ್ಬರಕ್ಕೆ ಸೇತುವೆ ಸಮುದ್ರ ಪಾಲಾಗಿದ್ದರಿಂದ ಮೇ. 8ರ ಸಂಜೆಯಿಂದಲೇ ತೇಲುವ ಸೇತುವೆ 3 ದಿನಗಳಮಟ್ಟಿಗೆ ಸ್ಥಗಿತಗೊಂಡಿರುವುದಾಗಿ ತಿಳಿದುಬಂದಿದೆ.

ಪ್ರವಾಸಿಗರ ಆಕರ್ಷಣೆಯಾಗಿದ್ದ ಸೇತುವೆ
ಫ್ಲೋಟಿಂಗ್‌ ಬ್ರಿಡ್ಜ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಲೇ ಮಲ್ಪೆ ಬೀಚ್‌ ಪ್ರವಾಸಿಗರಿಂದಲೇ ತುಂಬಿಹೋಗಿತ್ತು. ಕೇರಳದ ಬೇಪೋರ್ ಬೀಚ್ ಹೊರತು ಪಡಿಸಿ ದೇಶದಲ್ಲೇ ಇಂತಹ ಸೇತುವೆ ಎಲ್ಲೂ ಇಲ್ಲದ ಕಾರಣ ಪ್ರವಾಸಿಗರಲ್ಲಿ ಕುತೂಹಲವನ್ನು ಮೂಡಿಸಿತ್ತು. ಇದೀಗ ಸೇತುವೆ ನೀರುಪಾಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತೇಲುವ ಸೇತುವೆಯಲ್ಲಿ ತೇಲಬೇಕೆನ್ನುವ ಪ್ರವಾಸಿಗರ ಆಸೆಗೆ ತಣ್ಣೀರೆರೆಚಿದಂತಾಗಿದೆ.

























































































































error: Content is protected !!
Scroll to Top