ಮೇ 9 : ಯಕ್ಷ ರಂಗಾಯಣ ಕಾರ್ಯ ಆರಂಭೋತ್ಸವ

ಕಾರ್ಕಳ : ಸರಕಾರ ಹೊಸದಾಗಿ ಕಾರ್ಕಳದಲ್ಲಿ ಸ್ಥಾಪಿಸಿದ ಯಕ್ಷ ರಂಗಾಯಣ ಇದರ ಚಟುವಟಿಕೆಯ ಆರಂಭೋತ್ಸವವು ಮೇ 9ರಂದು ಪೂ. 9 ಗಂಟೆಗೆ ಕಾರ್ಕಳ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ಆರಂಭಗೊಳ್ಳಲಿದೆ.
ಯಕ್ಷ ರಂಗಾಯಣದ ಕಾರ್ಯಾಲಯವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಬಳಿಕ ಯಕ್ಷರಂಗಾಯಣದ ಪ್ರಥಮ ಕಾರ್ಯಕ್ರಮವಾಗಿ “ಚಿಣ್ಣರಮೇಳ ” ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ದೊರೆಯಲಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಚಿಣ್ಣರ ಮೇಳ ಉದ್ಘಾಟಿಸಲಿರುವರು. ಸಚಿವ ವಿ. ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ, ವರ್ಧಮಾನ ವಿದ್ಯಾ ಸಂಸ್ಥೆಯ ಸಂಚಾಲಕಿ ಶಶಿಕಲಾ ಕೆ. ಹೆಗ್ಡೆ, ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಅತಿಥಿಗಳಾಗಿ ಭಾಗವಹಿಸಲಿರುವರು.

ಚಿಣ್ಣರ ಮೇಳದಲ್ಲಿ

ಯಕ್ಷರಂಗಾಯಣ ನಿರ್ದೇಶಕ ಜೀವನ್‌ ರಾಂ ಸುಳ್ಯ ಅವರ ಮಾರ್ಗದರ್ಶನದಲ್ಲಿ ಚಿಣ್ಣರ ಮೇಳ ನಡೆಯುತ್ತಿದ್ದು, ಮೇಳದಲ್ಲಿ ಜಾದೂ, ಅಭಿನಯ, ಮಾತುಗಾರಿಕೆ, ಮುಖವಾಡ, ಕ್ರಾಫ್ಟ್, ಚಿತ್ರಕಲೆ, ಪ್ಲೇ ಮಾಡಲಿಂಗ್, ಗ್ರೀಟಿಂಗ್ಸ್, ವರ್ಲಿಕಲೆ, ಕಥಾಭಿನಯ, ಅಭಿನಯ ಗೀತೆ, ಸಾಹಿತ್ಯ-ಪುಸ್ತಕ ಪ್ರೀತಿ, ಗೂಡುದೀಪ-ಗಾಳಿಪಟ ತಯಾರಿ, ಟೈ & ಡೈ – ಬಟ್ಟೆಗೆ ಬಣ್ಣ, ಅಂದದ ಹಸ್ತಾಕ್ಷರ, ಹಾಡು-ಕುಣಿತ, ಕಿರು ನಾಟಕ ತಯಾರಿ/ಪ್ರದರ್ಶನ, ಆತ್ಮವಿಶ್ವಾಸ ಮೂಡಿಸುವ ರಂಗದಾಟಗಳು, ಅಗ್ನಿ ಶಮನ ಪ್ರಾತ್ಯಕ್ಷಿಕೆ, ಆರೋಗ್ಯ ಮಾಹಿತಿ, ಹಾವು-ನಾವು-ಪರಿಸರ ಪ್ರಾತ್ಯಕ್ಷಿಕೆ ಮಾತ್ರವಲ್ಲದೇ ಮಕ್ಕಳ ಮಾನಸಿಕ, ದೈಹಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರಕ ಹಲವು ಸಂಗತಿಗಳು ಇರಲಿದೆ.
ಜಾದೂಗಾರ ಕುದ್ರೋಳಿ ಗಣೇಶ್, ಚಿತ್ರ ಕಲಾವಿದ ಜನಾರ್ದನ ಹಾವಂಜೆ, ಪರಿಸರ ತಜ್ಞ ಕಲಾವಿದ ದಿನೇಶ್ ಹೊಳ್ಳ, ಸೃಜನಶೀಲ ಕಲಾ ಶಿಕ್ಷಕ ತಾರಾನಾಥ ಕೈರಂಗಳ, ಚಿತ್ರ ಕಲಾವಿದ ಚಂದ್ರನಾಥ ಬಜಗೋಳಿ, ರಂಗ ನಿರ್ದೇಶಕ ಶಿವಗಿರಿ ಕಲ್ಲಡ್ಕ, ರಂಗನಟ ನೀನಾಸಂ ಉಜ್ವಲ್ ಯು.ವಿ. ಮಂಗಳೂರು, ಸೃಜನಶೀಲ ಕಲಾ ಶಿಕ್ಷಕ ಪ್ರೇಮನಾಥ ಮರ್ಣೆ, ರಾಜ್ಯ ತರಬೇತುದಾರ ರಾಜೇಂದ್ರ ಭಟ್ ಕಾರ್ಕಳ, ಪರಿಸರ ತಜ್ಞ ಗುರುರಾಜ್ ಸನಿಲ್, ಚಿತ್ರ ಕಲಾವಿದ ಚಂದ್ರಾಡ್ಕರ್‌ ಮಂಗಳೂರು, ಕ್ಲೇ ಕಲಾವಿದ ವೆಂಕಿ ಪಲಿಮಾರು, ವೈದ್ಯ ಡಾ. ಸೌಜನ್ಯ ಬಿ.ಎಸ್., ಸಹಾಯಕ ಸಂಪನ್ಮೂಲ ವ್ಯಕ್ತಿಗಳಾದ ಶಿಶಿರ ಕಲ್ಲೂರ ಉಡುಪಿ, ಪ್ರಮೋದ್ ಶೆಟ್ಟಿ ಉಡುಪಿ, ರೋನಿತ್ ರಾಯ್ ಬೆಂಗಳೂರು, ಭಾವನಾ ವಿಷ್ಣುಮೂರ್ತಿ ಕೆರೆಮಠ, ಅನಿರುದ್ಧ ಉಡುಪಿ, ಶಿಲ್ಪ ಶೆಟ್ಟಿ ಉಡುಪಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.





























































































error: Content is protected !!
Scroll to Top