ಕಾರ್ಕಳ : ಬಂಡಿಮಠ ಬಸ್‌ಸ್ಟ್ಯಾಂಡ್ ಎದುರು ಶ್ರೀ ಮೂಡುಮಹಾಗಣಪತಿ ದೇವಸ್ಥಾನದ ಬಳಿಯಿರುವ ಸಂಕರ್ಷಣ ಕಟ್ಟಡದಲ್ಲಿ ನೂತನವಾಗಿ ಶ್ರೀಪದ್ಮಾ ಕ್ರೀಮ್ ಕೆಫೆಯು ಮೇ 8ರಂದು ಶುಭಾರಂಭಗೊಳ್ಳಲಿದೆ. ಬೆಳಿಗ್ಗೆ ಗಂಟೆ 9.30ಕ್ಕೆ ಸಚಿವ ವಿ. ಸುನೀಲ್ ಕುಮಾರ್ ಕೆಫೆ ಉದ್ಘಾಟಿಸಲಿರುವರು. ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್, ಡಾ. ಸಂತೋಷ್ ಕುಮಾರ್ ಶೆಟ್ಟಿ ಅಜೆಕಾರ್, ಕುಂದಾಪುರ ಸಹನಾ ಗ್ರೂಪ್ಸ್ ನ ವ್ಯವಸ್ಥಾಪಕ ನಿರ್ದೇಶಕ ಸುರೇಂದ್ರ ಶೆಟ್ಟಿ, ಎಚ್.ಪಿ.ಎ. ಜೈನ್ ಕಾಂಪೌಂಡ್ ದಾನಶಾಲೆಯ ಕೆ. ಮಹಾವೀರ ಪ್ರಸಾದ್, ನಿತ್ಯಾನಂದ ವುಡ್ ಇಂಡಸ್ಟ್ರೀಸ್ ಕುರ್ಪಾಡಿಗುತ್ತು ಶಿವ ಕುಮಾರ್, ಉದ್ಯಮಿ ವಿಜಯ ಶೆಟ್ಟಿ, ಪವರ್‌ಪಾಯಿಂಟ್ ಮಾಲಕ ಮಹಾವೀರ ಹೆಗ್ಡೆ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ಮಾಲಕರು ತಿಳಿಸಿದ್ದಾರೆ.
ಮೇ 8 : ಶ್ರೀಪದ್ಮಾ ಕ್ರೀಮ್ ಕೆಫೆ ಶುಭಾರಂಭ















































