ಅಕ್ರಮದ ಬಗ್ಗೆ ಯಾರ ಬಳಿ ದಾಖಲೆ ಇದ್ದರೂ ನೀಡಲಿ – ತನಿಖೆ ಮಾಡಿಸುತ್ತೇವೆ : ಸಿಎಂ ಬೊಮ್ಮಾಯಿ

ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣ ಸೇರಿದಂತೆ ಯಾವುದೇ ಭ್ರಷ್ಟಾಚಾರ, ಅಕ್ರಮಗಳ ಕುರಿತು ಹೇಳಿಕೆ ನೀಡುವವರು ಅದಕ್ಕೆ ಪೂರಕವಾದ ದಾಖಲೆಗಳನ್ನು ಸಾಕ್ಷ್ಯಗಳನ್ನು ಒದಗಿಸುವುದು ಅವರ ಕರ್ತವ್ಯ ಕೂಡ ಆಗುತ್ತದೆ. ಯಾರ್ಯಾರು ಹೇಳಿಕೆ ನೀಡಿದ್ದಾರೋ ಅವರು ಹೇಳಿಕೆಗೆ ಬದ್ಧವಾಗಿ ದಾಖಲೆಗಳನ್ನು, ಪುರಾವೆಗಳನ್ನು ನೀಡಲಿ, ಸರ್ಕಾರ ಸೂಕ್ತ ತನಿಖೆ ಮಾಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನರುಚ್ಛರಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾರ ಬಳಿ ದಾಖಲೆ ಇದ್ದರೂ ತಂದು ಕೊಡಲಿ,ಯಾರನ್ನೂ ರಕ್ಷಣೆ ಮಾಡುವ ಉದ್ದೇಶ ಇಲ್ಲ. ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಪ್ರಿಯಾಂಕ್ ಖರ್ಗೆಯವರು ಮೂಲ ಕಾಂಗ್ರೆಸ್ಸಿಗರು, ಅವರಿಗೆ ಭ್ರಷ್ಟಾಚಾರ, ಅಕ್ರಮಗಳೆಲ್ಲ ಕರಗತವಾಗಿದೆ, ಕಾಂಗ್ರೆಸ್ ನವರಿಂದ ನಾವು ಪಾಠ ಕಲಿಯುವ ಅವಶ್ಯಕತೆಯಿಲ್ಲ ಎಂದರು. 





























































































error: Content is protected !!
Scroll to Top