ಮೇ. 9-15 : ಯಕ್ಷರಂಗಾಯಣ ವತಿಯಿಂದ ಚಿಣ್ಣರ ಮೇಳ 2022

ಕಾರ್ಕಳ : ಯಕ್ಷ ರಂಗಾಯಣ ಆಶ್ರಯದಲ್ಲಿ ರಂಗಮಾಂತ್ರಿಕ ಜೀವನ್‌ರಾಂ ಸುಳ್ಯ ನಿರ್ದೇಶನದಲ್ಲಿ ಮೇ. 9ರಿಂದ 15ರವರೆಗೆ ಚಿಣ್ಣರಮೇಳ ಮಕ್ಕಳ ಬೇಸಿಗೆ ಶಿಬಿರ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 4.30ಕ್ಕೆ ಯಕ್ಷರಂಗಾಯಣ ಆವರಣ ಕೋಟಿ ಚೆನ್ನಯ ಥೀಂ ಪಾರ್ಕ್ ನಲ್ಲಿ ಚಿಣ್ಣರ ಮೇಳ ನಡೆಯಲಿದೆ. ನಾಡಿನ ಪ್ರಸಿದ್ದ ಸಂಪನ್ಮೂಲ ವ್ಯಕ್ತಿಗಳಿಂದ ವೈವಿಧ್ಯಮಯ ವಿಷಯಗಳ ಕುರಿತು ತರಬೇತಿ ನೀಡಲಾಗುವುದು. 7 ರಿಂದ 15 ವರ್ಷದ ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಪ್ರವೇಶ ಶುಲ್ಕ ರೂ. 250 ಆಗಿದ್ದು, ಕಾರ್ಕಳ ವಿಕಾಸ ಜನಸೇವಾ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಮೇ 4-5-6 ರಂದು ಅರ್ಜಿಯನ್ನು ನೀಡಲಾಗುತ್ತಿದ್ದು, ಮಗುವಿನ ಭಾವ ಚಿತ್ರದೊಂದಿಗೆ ಅರ್ಜಿ ತುಂಬಿ ಯಕ್ಷರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಅವರಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ 9448215946 7975560114, ನಂಬರನ್ನು ಸಂಪರ್ಕಿಸಬಹುದಾಗಿದೆ.















































































































































error: Content is protected !!
Scroll to Top