ಕನ್ನಡ ಭಾಷೆಗೆ ಧಕ್ಕೆಯಾದರೆ ಸಹಿಸಲಾಗದು : ಸಚಿವ ಸುನಿಲ್‌

ಉಡುಪಿ : ಹಿಂದಿ ಭಾಷೆಯನ್ನು ಅನ್ಯ ರಾಜ್ಯದೊಂದಿಗೆ ವ್ಯವಹರಿಸಲು ಸಂಪರ್ಕ ಭಾಷೆಯಾಗಿ ಮಾತ್ರ ಬಳಸಲಾಗುತ್ತದೆ. ರಾಜ್ಯದಲ್ಲಿ ಹಿಂದಿ ಹೇರಿಕೆ ಎಂಬುವುದಿಲ್ಲ. ಕರ್ನಾಟಕದಲ್ಲಿ ಕನ್ನಡ ಭಾಷೆಗಷ್ಟೇ ಪ್ರಾಧಾನ್ಯತೆ, ಕನ್ನಡ ಭಾಷೆಗೆ ಧಕ್ಕೆಯಾದರೆ ಸಹಿಸಲಾಗುವುದಿಲ್ಲ ಎಂದು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್ ಹೇಳಿದರು.
ಪ್ರಶ್ನೆ ಪತ್ರಿಕೆ ಅಕ್ರಮದ ಬಗ್ಗೆ ಪ್ರತಿಕ್ರಯಿಸಿದ ಅವರು ಪ್ರಿಯಂಕ್‌ ಖರ್ಗೆ ಗಾಳಿಯಲ್ಲಿ ಗುಂಡು ಹಾರಿಸುವುದು ಮಾತ್ರ ಪ್ರಕರಣದ ಬಗ್ಗೆ ಅವರಲ್ಲಿ ಸ್ಪಷ್ಟತೆ ಇಲ್ಲ. ಈಗ ಸಿಐಡಿ ನೋಟಿಸ್‌ಗೆ ಉತ್ತರ ಕೊಡದೇ ಪಿಎಸ್‌ಐ ಅಕ್ರಮ ವಿಚಾರದಲ್ಲೂ ಹೇಳಿಕೆಗಳನ್ನು ಕೊಟ್ಟು ವಿಫಲ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಪಕ್ಷದಲ್ಲಿ ಹೊಸತನ ಮೂಡಿಬರುವಲ್ಲಿ ಪ್ರತಿಯೊಬ್ಬ ಕಾರ್ಯಕರ್ತನು ಸಮಾಜಕ್ಕೆ ಪೂರಕವಾಗುವಂತಹ ಆಲೋಚನೆಯೊಂದಿಗೆ ಪಕ್ಷದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.















































































































































error: Content is protected !!
Scroll to Top