ಕಾರ್ಕಳದಲ್ಲಿ ಮತ್ತೆ ಮುಂದುವರಿದ ದನಕಳ್ಳತನ – ಸಿಸಿಟಿವಿಯಿಂದ ಕೃತ್ಯ ಬಯಲು

ಕಾರ್ಕಳ : ನಗರದ ಬಂಗ್ಲೆಗುಡ್ಡೆ ಶ್ರೀ ವಿದ್ಯಾಸರಸ್ವತಿ ಭಜನಾ ಮಂದಿರದ ಬಳಿಯಿಂದ ಎ. 2ರ ಮುಂಜಾನೆ 2: 45 ವೇಳೆಗೆ ಐಷಾರಾಮಿ ಕಾರಿನಲ್ಲಿ ಬಂದ ಗೋ ಕಳ್ಳರು ದನವನ್ನು ಕಾರಿಗೆ ತುಂಬಿಸಿ ಕಳ್ಳತನ ನಡೆಸಿದ್ದರು. ಘಟನೆಯ ದೃಶ್ಯಾವಳಿ ಪಕ್ಕದಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿತ್ತು. ಘಟನೆ ಕುರಿತಂತೆ ಭಜನಾ ಮಂದಿರದ ಅಧ್ಯಕ್ಷರು ಕಾರ್ಕಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಾದ ಅರ್ಧ ಗಂಟೆಯಲ್ಲಿ ಆರೋಪಿ ಬಂಧನ
ಆರೋಪಿಗಳ ಪತ್ತೆಗಾಗಿ ಮಿಂಚಿನ ಕಾರ್ಯಾಚರಣೆ ನಡೆಸಿದ ಕಾರ್ಕಳ ನಗರ ಠಾಣೆ ಪೊಲೀಸರು ಮೂಡಬಿದ್ರೆಯಲ್ಲಿ ಓರ್ವ ಆರೋಪಿಯನ್ನು ವಾಹನ ಸಮೇತ ವಶಕ್ಕೆ ಪಡೆದಿರುತ್ತಾರೆ. ಉಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ. ಡಿವೈಎಸ್‌ಪಿ ವಿಜಯ ಪ್ರಸಾದ್‌, ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌ ಮಾರ್ಗದರ್ಶನದಲ್ಲಿ ಎಸ್‌ಐ ಪ್ರಸನ್ನ‌ ಎಂ.ಎಸ್.‌, ಅಪರಾಧ ವಿಭಾಗದ ಎಸ್‌ಐ ದಾಮೋದರ್‌, ಘನಶ್ಯಾಮ್, ಸಿದ್ದರಾಯಪ್ಪ
ಕಾರ್ಯಾಚರಣೆಯಲ್ಲಿದ್ದರು.









































































































error: Content is protected !!
Scroll to Top