ಕಾರ್ಕಳ : ಚಲಿಸುತ್ತಿರುವ ಬೈಕ್‌ಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್ ಪಲ್ಟಿಯಾಗಿ ದಂಪತಿ ಗಾಯಗೊಂಡ ಘಟನೆ ಫೆ.13 ರಂದು ಪೆರ್ವಾಜೆ-ತೆಳ್ಳಾರ್ ರಸ್ತೆಯ ಗಂಗಾ ಪ್ಯಾರಡೇಸ್ ಬಳಿ ನಡೆದಿದೆ.
ತೆಳ್ಳಾರಿನ ಗುಡ್ಡೆಯಂಗಡಿ ನಿವಾಸಿ ಜಗದೀಶ್ ವಿ. ಮತ್ತು ಅವರ ಪತ್ನಿ ಶ್ರುತಿ ಗಾಯಗೊಂಡವರು. (KA-19-ET- 7194) ಬೈಕಿನಲ್ಲಿ ಜೋಡುರಸ್ತೆಯಿಂದ ತೆಳ್ಳಾರು ಕಡೆಗೆ ಸಾಗುತ್ತಿದ್ದಾಗ ನಾಯಿಯೊಂದು ಅಡ್ಡ ಬಂದಿದ್ದು ತಕ್ಷಣ ಜಗದೀಶ್ ಅವರು ಬ್ರೇಕ್ ಹಾಕಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆಸೆಯಲ್ಪಟ್ಟಿತು. ಜಗದೀಶ್ ಅವರಿಗೆ ತರಚಿದ ಗಾಯವಾಗಿದ್ದು, ಶ್ರುತಿ ಅವರನ್ನು ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ : ಬೈಕ್ ಅಪಘಾತ – ದಂಪತಿ ಗಾಯ
