ಅಮೃತ ಭಾರತಿ ವಿದ್ಯಾಲಯ : ಕ್ಷಯ ರೋಗ ಮಾಹಿತಿ ಕಾರ್ಯಕ್ರಮ

ಕಾರ್ಕಳ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿಗಳ ಕಚೇರಿ, ರಾಷ್ಟ್ರೀಯ ಕ್ಷಯರೋಗ ‌‌ನಿರ್ಮೂಲನ ಕಾರ್ಯಕ್ರಮ ಕ್ಷಯ ಘಟಕ ಕಾರ್ಕಳ ಆಯೋಜಿಸಿದ ಅಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಅಮೃತ ಭಾರತಿ ವಿದ್ಯಾಲಯದಲ್ಲಿ ಜ. 15ರಂದು ಕ್ಷಯರೋಗದ ಕುರಿತು ಮಾಹಿತಿ ಕಾರ್ಯಕ್ರಮ ಜರಗಿತು.
ಹೆಬ್ರಿ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷ ಕುಮಾರ್ ಬೈಲೂರು ಮಾತನಾಡಿ, ಕ್ಷಯರೋಗದ ಅರಿವು ಪ್ರತಿಯೊಬ್ಬರಿಗೂ ಇರಬೇಕು ಎಂದರು.
ಹಿರಿಯ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಶಿವಕುಮಾರ ಮಾತನಾಡಿ, ಕ್ಷಯರೋಗದ ನಿರ್ಮೂಲನ ಕ್ರಮ ಹಾಗೂ 2025ಕ್ಕೆ ಕ್ಷಯಮುಕ್ತ ಮಾಡುವ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆ ಕುರಿತು ಹಾಗೂ ಕಾರ್ಯತಂತ್ರದ ಕುರಿತು ಮಾಹಿತಿ ನೀಡಿದರು.
ಅಮೃತ ಭಾರತಿ ವಿದ್ಯಾಕೇಂದ್ರದ ಪ್ರಾಂಶುಪಾಲ ಅರುಣ ಕುಮಾರ್, ಮುಖ್ಯಶಿಕ್ಷಕರಾದ ಅಪರ್ಣಾ ಆಚಾರ್ ಉಪಸ್ಥಿತರಿದ್ದರು. ಮಹೇಶ ಹೈಕಾಡಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಬಂಧ ಸ್ಪರ್ಧೆ
ಕ್ಷಯಮುಕ್ತ ಕರ್ನಾಟಕಕ್ಕಾಗಿ ಯುವಜನತೆಯ ಪಾತ್ರ ಪ್ರಬಂಧ ಸ್ಪರ್ಧೆ ನಡೆಸಲಾಗಿದ್ದು, ಹೆಬ್ರಿ ತಾಲೂಕಿನ 10 ಪ್ರೌಢಶಾಲೆಯ 38 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.









































































































error: Content is protected !!
Scroll to Top