ಅನೇಕರು ಮದುವೆ `ಸಮಾರಂಭಗಳನ್ನು ನಮ್ಮಲ್ಲಿ ನೋಡುವುದಕ್ಕಿಂತಲೂ ಹೆಚ್ಚಾಗಿ ಮದುವೆ ಸಮಾರಂಭಗಳಲ್ಲಿ ಮಾಡಿದಂತಹ ಊಟದ ರುಚಿ ಸವಿಯಲು ಹೋಗುವುದುಂಟು.
ಇದರಲ್ಲೇನೂ ತಪ್ಪಿಲ್ಲ ಬಿಡಿ ಅವರವರ ಇಷ್ಟಾರ್ಥಗಳು ಅವರವರಿಗೆ ಬಿಟ್ಟಿದ್ದು . ಆದರೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಮದುವೆಯ ಸಮಾರಂಭದಲ್ಲಿ ಅತಿಥಿಗಳು ಭೋಜನ ಆನಂದಿಸುತ್ತಿದ್ದರೆ, ಹಿಂಬದಿಯಲ್ಲಿ ಭಾರಿ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದದ್ದನ್ನು ನೋಡಬಹುದು. ಹೌದು, ಮುಂಬೈ ಖಬರ್ 9 ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ 24 ಸೆಕೆಂಡಿನ ವಿಡಿಯೋ ತುಣುಕಿನಲ್ಲಿ ಥಾಣೆಯ ಭವಾಂಡಿಯ ಅನ್ಸಾರಿ ಮ್ಯಾರೇಜ್ ಹಾಲ್‌ನಲ್ಲಿ ಭಾನುವಾರ ಸಂಜೆ ಬೆಂಕಿ ಹೊತ್ತಿ ಉರಿಯುತ್ತಿರುವುದು ನೋಡಬಹುದು. ಆದರೆ ತಮಾಷೆಯೆಂದರೆ ಬೆಂಕಿ ಹತ್ತಿದ ತಕ್ಷಣ ಜನರು ಅದನ್ನು ಆರಿಸಲು ಓಡಿ ಹೋಗುತ್ತಾರೆ, ಆದರೆ ಇಲ್ಲಿ ಬಂದಿರುವ ಅತಿಥಿಗಳು ಬೆಂಕಿಯನ್ನು ಗಮನಿಸಿದ ನಂತರವೂ, ತಮ್ಮ ಸಂಭಾಷಣೆಗಳನ್ನು ಮುಂದುವರಿಸುತ್ತಾ ಆಹಾರ ಸೇವಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಮೂಲದ ಪ್ರಕಾರ, ಮಹಾರಾಷ್ಟ್ರದ ಮದುವೆ ಸಭಾಂಗಣದ ಸ್ಟೋರ್ ರೂಮ್‌ನಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಈ ಪ್ರದೇಶದಲ್ಲಿ ನಿಲ್ಲಿಸಿದ್ದ 6 ದ್ವಿಚಕ ವಾಹನಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.


























