ಮನುಷ್ಯ ಇದನ್ನೆಲ್ಲ ತಿಂದರೆ ಭೂಮಿಗೆ ಆಪತ್ತು ! ಆಹಾರದ ಆಯ್ಕೆಯಲ್ಲಿ ಎಚ್ಚರಿಕೆ ಅಗತ್ಯ

ಈ ಭೂಮಿ ಮೇಲಿನ ನಮ್ಮ ಆಸ್ತಿತ್ವ ನಾವು ತಿನ್ನುವ ಆಹಾರದ ಮೇಲೆ ಅವಲಂಬಿಸಿದೆ. ನಾವಿರುವ ಈ ಭೂಮಿಯ ಅಳಿವು-ಉಳಿವಿಗೂ ನಮ್ಮ ಆಹಾರ ಕಾರಣವಾಗುತ್ತೆ ಅದನ್ನು ತಿಳಿಸುವಂಥ ಸಮೀಕ್ಷೆಯೊಂದು ಹೊರಬಿದ್ದಿದ್ದು, ಮನುಷ್ಯ ಇನ್ನು ಯೋಚನೆ ಮಾಡಿ ತಿನ್ನುವಂತಾಗಿದೆ.

ಹೌದು.. ಭೂಮಿಯ ಆಸ್ತಿತ್ವಕ್ಕೆ ಧಕ್ಕೆ ಬರಬಾರದು ಎಂದರೆ ಮನುಷ್ಯ ತನ್ನ ಆಹಾರದ ಆಯ್ಕೆಯಲ್ಲಿ ಎಚ್ಚರಿಕೆಯಿಂದ ಇರಬೇಕಿದೆ. ಭೂಗ್ರಹಕ್ಕೆ ತೊಂದರೆ ಉಂಟಾಗಬಾರದು ಎಂದರೆ ಕೆಲವೊಂದು ಆಹಾರಗಳನ್ನು ತಿನ್ನದಿರುವುದೇ ಒಳಿತು ಎಂಬುದನ್ನು ಸಮೀಕ್ಷೆಯೊಂದು ಹೊರಹಾಕಿದೆ.

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ಪರಿಸರದ ಮೇಲೆ ಆಹಾರದ ಪರಿಣಾಮಗಳ ಕುರಿತು 20 ಅಧ್ಯಯನಗಳನ್ನು ಪರಿಶೀಲಿಸಿರುವ ಯುನಿವರ್ಸಿಟಿ ಆಫ್ ಸೌತ್ ಆಸ್ಟ್ರೇಲಿಯಾ ಡಯೆಟಿಷಿಯನ್ ಸಾರಾ ಫೋರ್ಟ್ಸ್ ಆಹಾರದ ಆಯ್ಕೆಯಲ್ಲಿ ಜಾಗರೂಕರಾಗಿರುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದೆ.

ಸಿಹಿತಿಂಡಿ, ಕೇಕ್, ಕರಿದ ತಿಂಡಿ ಹಾಗೂ ಸಂಸ್ಕರಿತ ಆಹಾರಗಳ ಸೇವನೆಯಿಂದ ಕಾರ್ಬನ್ ಡಯಾಕ್ಸೆಡ್ ಹೊರಸೂಸುವಿಕೆ ಹೆಚ್ಚಾಗುತ್ತಿದೆ. ಇದು ಪರಿಸರಕ್ಕೆ ಮಾರಕವಾಗುವ ಜತೆಗೆ ಭೂಮಿಯ ಆಸ್ತಿತ್ವಕ್ಕೂ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.























































error: Content is protected !!
Scroll to Top