ಮೂಡುಬಿದಿರೆ : ಪಿಕ್‌ಅಪ್ ಪಲ್ಟಿ ,ಚಾಲಕ ಸ್ಥಳದಲ್ಲೇ ಸಾವು

ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ, ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂಡೇಲುಸುತ್ತಿನಲ್ಲಿ ಮಂಗಳವಾರ ರಾತ್ರಿ ಪಿಕ್ ಅಪ್ ವಾಹನ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಎಡಪದವು ಕನ್ನೊಳಿ ನಿವಾಸಿ ಯಾದವ (38) ಮೃತ ಚಾಲಕ ಎಂದು ತಿಳಿದುಬಂದಿದೆ.

ಮಂಗಳವಾರ ರಾತ್ರಿ ಅವರು ಮೂಡುಬಿದಿರೆ ಕಡೆಯಿಂದ ಎಡಪದವಿಗೆ ಪಿಕ್ ವಾಹನ ಚಲಾಯಿಸುತ್ತಿದ್ದು , ಹಂಡೇಲು ತಿರುವಿನಲ್ಲಿ ಪಿಕ್ ಅಪ್ ಪಲ್ಟಿಯಾಗಿ, ತೆಂಗಿನ ಮರಕ್ಕೆ ಢಿಕ್ಕಿಯಾಗಿದೆ. ಪರಿಣಾಮ ಯಾದವ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.































































































error: Content is protected !!
Scroll to Top