ಯುನೈಟೆಡ್ ಅರಬ್ ಎಮಿರೆಟ್ಸ್ ಪ್ರಮುಖ ನಗರಗಳಲ್ಲಿ ಒಂದಾದ ದುಬೈನ ಆಡಳಿತಗಾರ ಮೊಹಮ್ಮದ್ ಬಿನ್ ರಶೀದ್ ಆಲ್ ಮಕಮ್, ಪುತ್ರಿಯರಲ್ಲಿ ಒಬ್ಬರಾದ ಶೇಖ್ ಲತೀಫಾ ಅವರು, ಮೂರು ಹುಲಿಗಳೊಂದಿಗೆ ಬೆಕ್ಕಿನ ಮರಿಯೊಂದು ಸೆಣಸಾಡುವ ಮೈನವಿರೇಳಿಸುವ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಲತೀಫಾ ಅವರು ಶೇರ್ ಮಾಡಿರುವುದು ಸಿಟಿಟಿವಿ ವಿಡಿಯೋಗಳಾಗಿವೆ. ಹುಲಿಗಳಿರುವ ಜಾಗಕ್ಕೆ ಆಕಸ್ಮಿಕವಾಗಿ ಹೋಗುವ ಬೆಕ್ಕಿನ ಮರಿಯನ್ನು ನೋಡಿ ಮೂರು ಹುಲಿಗಳು ಏಕಾಮಿಕ ದಾಳಿ ಮಾಡಿವೆ. ಯಾವುದಕ್ಕೂ ಹೆದರದ ಮರಿ, ಮೂರು ಹುಲಿಗಳೊಂದಿಗೆ ಸೆಣಸಾಡಿ ಕೊನೆಗೆ ಇಬ್ಬರು ಕಾವಲುಗಾರರ ರಕ್ಷಣೆಯಿಂದ ಬದುಕುಳಿದಿದೆ. ಇನ್‌ಸ್ಟಾಗ್ರಾಂನಲ್ಲಿ ಬರೆದಿರುವ ಲತೀಫಾ ಅವರು,ಕೆಚ್ಚೆದೆಯ ಬೆಕ್ಕು ಹುಲಿಗಳೊಂದಿಗೆ ಹೋರಾಡಿ ಕೊನೆಗೆ ಕಾವಲುಗಾರರಿಂದ ರಕ್ಷಣೆಗೆ ಒಳಗಾಗಿದೆ. ಇನ್ನು ಮುಂದೆ ಈ ಬೆಕ್ಕಿನ ಮರಿ ಸ್ವಲ್ಪವೂ ದಾರಿ ತಪ್ಪುವುದಿಲ್ಲ ಎಂದು ಬರೆದುಕೊಂಡಿದ್ದಾರೆ.























