ಯುವ ಸ್ಪಂದನ ಗೆಳೆಯರ ಬಳಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಕಸದಿಂದ ರಸ ಸ್ಪರ್ಧೆ

ಕಾರ್ಕಳ : ಯುವಸ್ಪಂದನ ಗೆಳೆಯರ ಬಳಗ ಜಾರ್ಕಳ ಮುಂಡ್ಲಿ ಇದರ 50ನೇ ಸ್ವಚ್ಛತಾ ಅಭಿಯಾನದಂಗವಾಗಿ ಆನ್‌ಲೈನ್‌ ಮೂಲಕ ಕಸದಿಂದ ರಸ ಎಂಬ ವಿಶೇಷ ಸ್ಪರ್ಧೆಯನ್ನು ಕಾರ್ಕಳ ತಾಲೂಕಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದೆ. ಸ್ಪರ್ಧೆಯನ್ನು ಮೂರು ಹಂತಗಳಲ್ಲಿ ಆಯೋಜಿಸಲಾಗಿದ್ದು, 4 ರಿಂದ 7, 8 ರಿಂದ 10, 11 ರಿಂದ 12 ತರಗತಿವರೆಗಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಶಾಲಾ ಐಡಿ ಅಥವಾ ಶಾಲಾ ಹೆಸರನ್ನು ನಮೂದಿಸಿ, ತಯಾರಿಸಿದ ಮಾದರಿಯನ್ನು ಎ. 30ರ ಒಳಗೆ 7795599677 ವಾಟ್ಸಾಪ್‌ ನಂಬರಿಗೆ ಕಳುಹಿಸಬಹುದಾಗಿದೆ ಎಂದು ಯುವ ಸ್ಪಂದನ ಗೆಳೆಯರ ಬಳಗ ಪ್ರಕಟನೆಯಲ್ಲಿ ತಿಳಿಸಿದೆ.































error: Content is protected !!
Scroll to Top